ADVERTISEMENT

ಚೆಸ್‌ ವಿಶ್ವಕಪ್‌: ವೀ–ಸಿಂದರೋವ್ ಆಟ ಡ್ರಾ; ಇಂದು ಎರಡನೇ ಕ್ಲಾಸಿಕಲ್ ಆಟ

ಪಿಟಿಐ
Published 24 ನವೆಂಬರ್ 2025, 22:30 IST
Last Updated 24 ನವೆಂಬರ್ 2025, 22:30 IST
ಸಿಂದರೋವ್ (ಎಡಗಡೆ) ಮತ್ತು ವೀ ಯಿ
ಫಿಡೆ ಚಿತ್ರ
ಸಿಂದರೋವ್ (ಎಡಗಡೆ) ಮತ್ತು ವೀ ಯಿ ಫಿಡೆ ಚಿತ್ರ   

ಪಣಜಿ: ಕಪ್ಪು ಕಾಯಿಗಳಲ್ಲಿ ಮತ್ತೊಮ್ಮೆ ಅತ್ಯುತ್ತಮವಾಗಿ ಆಡಿದ ಚೀನಾದ ಜಿಎಂ ವೀ ಯಿ ಅವರು ಉಜ್ಬೇಕಿಸ್ತಾನದ ಜಿಎಂ ಜಾವೊಖಿರ್ ಸಿಂದರೋವ್ ಅವರ ಜೊತೆ ಫಿಡೆ ಚೆಸ್‌ ವಿಶ್ವಕಪ್ ಫೈನಲ್ ಪಂದ್ಯದ ಮೊದಲ ಕ್ಲಾಸಿಕಲ್ ಪಂದ್ಯವನ್ನು ಸೋಮವಾರ ಡ್ರಾ ಮಾಡಿಕೊಂಡರು.

ರಷ್ಯಾದ ಆ್ಯಂಡ್ರಿ ಇಸಿಪೆಂಕೊ ಅವರು ಮೂರನೇ ಸ್ಥಾನಕ್ಕಾಗಿ ನಡೆಯುತ್ತಿರುವ ಮುಖಾಮುಖಿಯಲ್ಲಿ ಉಜ್ಬೇಕಿಸ್ತಾನದ ನೊದಿರ್ಬೆಕ್ ಯಾಕುಬೊಯೇವ್ ಅವರನ್ನು 38 ನಡೆಗಳಲ್ಲಿ ಸೋಲಿಸಿ 1–0 ಮುನ್ನಡೆ ಪಡೆದರು. ಮಂಗಳವಾರ ನಡೆಯುವ ಎರಡನೇ ಆಟ ಕ್ಲಾಸಿಕಲ್ ಡ್ರಾ ಆದರೂ ಇಸಿಪೆಂಕೊ ಅವರು ಪ್ರತಿಷ್ಠಿತ ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅರ್ಹತೆ ಪಡೆಯಲಿದ್ದಾರೆ.

ವೀ ಅವರು ‘ಪೆಟ್ರೋವ್ ಡಿಫೆನ್ಸ್‌’ ಅನುಸರಿಸಿದರು. ಸಿಂದರೋವ್ ಅವರು ಗೆಲುವಿಗಾಗಿ ಪ್ರಯತ್ನಿಸಿ  ಕೊಂಚ ಎಡವಿದರು. ಆದರೆ ಮೈಯೆಲ್ಲಾ ಕಣ್ಣಾಗಿದ್ದ ಸಿಂದರೋವ್ ಅವರು ಎದುರಾಳಿ ಅದನ್ನು ಗೆಲುವಾಗಿ ಪರಿವರ್ತಿಸದಂತೆ ಅಷ್ಟೇ ಎಚ್ಚರಿಕೆಯಿಂದ ಆಡಿ ಪಂದ್ಯ ಸಮಬಲದ ಸ್ಥಿತಿಗೆ ತಂದರು. 50 ನಡೆಗಳ ನಂತರ ಇಬ್ಬರೂ ಡ್ರಾಕ್ಕೆ ಒಪ್ಪಿಕೊಂಡರು.

ADVERTISEMENT

ಮಂಗಳವಾರ ಎರಡನೇ ಕ್ಲಾಸಿಕಲ್ ಆಟವೂ ಡ್ರಾ ಆದಲ್ಲಿ ಬುಧವಾರ ಕಾಲಮಿತಿಯ ರ್‍ಯಾಪಿಡ್‌ ಪಂದ್ಯಗಳನ್ನು ಆಡಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.