ಗುಕೇಶ್
ಐಲ್ ಆಫ್ ಮ್ಯಾನ್: ಭಾರತದ ಗುಕೇಶ್, ವಿದಿತ್ ಗುಜರಾತಿ ಮತ್ತು ಅಭಿಮನ್ಯು ಪುರಾಣಿಕ್ ಅವರು ಗುರುವಾರ ಆರಂಭವಾದ ಫಿಡೆ ಗ್ರ್ಯಾಂಡ್ ಸ್ವಿಸ್ ಚೆಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಗೆಲುವಿನೊಡನೆ ಶುಭಾರಂಭ ಮಾಡಿದರು.
ಯುವ ಗ್ರ್ಯಾಂಡ್‌ಮಾಸ್ಟರ್‌ಗಳಾದ ಪ್ರಜ್ಞಾನಂದ ಮತ್ತು ಅರ್ಜುನ್ ಇರಿಗೇಶಿ ಅವರು ಎದುರಾಳಿಗಳ ಜೊತೆ ಮಾಡಿಕೊಳ್ಳಬೇಕಾಯಿತು.
ಗುಕೇಶ್ ಅವರು ಫ್ರಾನ್ಸ್‌ನ ಎಟಿನೆ ಬ್ಯಾಕ್ರಾಟ್ ವಿರುದ್ಧ, ವಿದಿತ್, ಜರ್ಮನಿಯ ಅಲೆಕ್ಸಾಂಡರ್ ಡೊನ್ಚೆಂಕೊ ವಿರುದ್ಧ ಜಯಗಳಿಸಿದರು. ಅಭಿಮನ್ಯು, ಓಪನ್ ವಿಭಾಗದಲ್ಲಿ ಮೊದಲ ಬಾರಿ ಆಡಿದ ಮಹಿಳಾ ವಿಶ್ವಕಪ್ ವಿಜೇತೆ ದಿವ್ಯಾ ದೇಶಮುಖ್ ಅವರನ್ನು 51 ನಡೆಗಳಲ್ಲಿ ಮಣಿಸಿದರು.
ಪ್ರಜ್ಞಾನಂದ, ಜೆಫ್ರಿ ಷಿಯಾಂಗ್ ಜೊತೆ, ಅರ್ಜುನ್, ಮಾಕ್ಸಿಮ್ ಚಿಗೇವ್ ಜೊತೆ ಡ್ರಾ ಮಾಡಿಕೊಂಡರು. ನಿಹಾಲ್ ಸರಿನ್, ರಾಸ್ಮಸ್ ಸ್ವೇನ್ ಜೊತೆ ಪಾಯಿಂಟ್ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.