
ಪ್ರಜಾವಾಣಿ ವಾರ್ತೆ
ನವದೆಹಲಿ: ಚೆಸ್ ಇತಿಹಾಸದಲ್ಲೇ ಫಿಡೆ ರೇಟಿಂಗ್ ಪಡೆದ ಅತಿ ಕಿರಿಯ ಆಟಗಾರ ಎಂಬ ದಾಖಲೆಗೆ ಭಾರತದ ಸರ್ವಜ್ಞ ಸಿಂಗ್ ಕುಶ್ವಾಹ ಪಾತ್ರನಾಗಿದ್ದಾನೆ. ಈ ಬಾಲಕ 3 ವರ್ಷ, ಏಳು ತಿಂಗಳು 20 ದಿನ ವಯಸ್ಸಿನಲ್ಲಿ ರೇಟಿಂಗ್ ಪಡೆದಿದ್ದಾನೆ.
ಅನಿಶ್ ಸರ್ಕಾರ್ ಎಂಬ ಬಾಲಕನ ಹೆಸರಿನಲ್ಲಿ ಈ ಹಿಂದಿನ ದಾಖಲೆ (3 ವರ್ಷ, 8 ತಿಂಗಳು, 19 ದಿನ) ಇತ್ತು. ಅನಿಶ್, 2024ರ ನವೆಂಬರ್‌ನಲ್ಲಿ ಈ ದಾಖಲೆಗೆ ಪಾತ್ರನಾಗಿದ್ದ.
ಮಧ್ಯಪ್ರದೇಶದ ಕುಶ್ವಾಹ, ರ್‍ಯಾಪಿಡ್ ಮಾದರಿಯಲ್ಲಿ 1572ರ ರೇಟಿಂಗ್ ಪಡೆದಿದ್ದಾನೆ. ರೇಟಿಂಗ್ ಪಡೆಯಬೇಕಾದರೆ, ಕಡೇಪಕ್ಷ ಆಟಗಾರನೊಬ್ಬ ತನಗಿಂತ ಮೇಲಿನ ರೇಟಿಂಗ್ ಪಡೆದಿರುವ ಆಟಗಾರನೊಬ್ಬನನ್ನು ಸೋಲಿಸಬೇಕಾಗುತ್ತದೆ. ಕುಶ್ವಾಹ, ಈ ದಾಖಲೆಯ ಹಾದಿಯಲ್ಲಿ ಮೂರು ರೇಟೆಡ್ ಆಟಗಾರರನ್ನು ಸೋಲಿಸಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.