
ಪಿಟಿಐ
ಪಣಜಿ: ಫಿಡೆ ವಿಶ್ವಕಪ್ ಚೆಸ್ ಟೂರ್ನಿಯಲ್ಲಿ ಶನಿವಾರವು ತುಸು ನೀರಸ ದಿನವಾಗಿ ದಾಖಲಾಯಿತು. ಏಕೆಂದರೆ ಚೀನಾದ ವೀ ಯಾಂಗ್ ಮತ್ತು ಉಜ್ಬೇಕಿಸ್ತಾನದ ಜಾವೊಕೀರ್ ಸಿಂದರೋವ್ ಅವರು ತಮ್ಮ ಎದುರಾಳಿಗಳ ವಿರುದ್ಧ ಹೆಚ್ಚಿನ ‘ಸಾಹಸ’ಕ್ಕೆ ಮನಸ್ಸು ಮಾಡಲಿಲ್ಲ. ಅದರಿಂದಾಗಿ ಸೆಮಿಫೈನಲ್‌ನ ಎರಡನೇ ಗೇಮ್‌ನಲ್ಲಿ ಅವರು ಡ್ರಾ ಮಾಡಿಕೊಂಡರು.
ಬಿಳಿಕಾಯಿಗಳೊಂದಿಗೆ ಆಡಿದ ವೀ ಯೀ ಅವರು ರಷ್ಯಾದ ಆ್ಯಂಡ್ರೆ ಎಸಿಪೆಂಕೊ ಎದುರು ಒಂದಿಷ್ಟು ಹೊತ್ತು ತಮ್ಮ ಸಾಮರ್ಥ್ಯ ಮೆರೆದರು.
ಇನ್ನೊಂದು ಗೇಮ್‌ನಲ್ಲಿ ಉಜ್ಬೇಕಿಸ್ತಾನದ ಸಿಂದರೋವ್ ಮತ್ತು ಅವರದೇ ದೇಶದ ನಾದಿರ್‌ಬೆಕ್ ಯಾಕೂಬ್ಬೋವಿ ಎದುರು ಡ್ರಾ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.