ADVERTISEMENT

Asian Games | ಭಾರತ ಐತಿಹಾಸಿಕ ಸಾಧನೆ: 28 ಚಿನ್ನ, 38 ಬೆಳ್ಳಿ, 41 ಕಂಚು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಅಕ್ಟೋಬರ್ 2023, 13:01 IST
Last Updated 7 ಅಕ್ಟೋಬರ್ 2023, 13:01 IST
<div class="paragraphs"><p>ಚಿತ್ರ ಕೃಪೆ: X/@Media_SAI</p></div>

ಚಿತ್ರ ಕೃಪೆ: X/@Media_SAI

   

ಹಾಂಗ್‌ಝೌ: ಏಷ್ಯನ್‌ ಕ್ರೀಡಾಕೂಟದಲ್ಲಿ ಒಟ್ಟು 107 ಪದಕಗಳನ್ನು ಗೆಲ್ಲುವ ಮೂಲಕ ಭಾರತ ಸಾರ್ವಕಾಲಿಕ ದಾಖಲೆ ಬರೆದಿದೆ.

ಇದರಲ್ಲಿ 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚಿನ ಪದಕಗಳು ಒಳಗೊಂಡಿವೆ.

ADVERTISEMENT

ಒಟ್ಟಾರೆಯಾಗಿ ಈ ಬಾರಿ ಅತಿ ಹೆಚ್ಚು ಪದಕಗಳನ್ನು ಗೆದ್ದ ದೇಶಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.

ಚೀನಾ 198 ಚಿನ್ನದೊಂದಿಗೆ ಅಗ್ರಸ್ಥಾನದಲ್ಲಿದ್ದು, ಜಪಾನ್ 40 ಮತ್ತು ರಿಪಬ್ಲಿಕ್ ಆಫ್ ಕೊರಿಯಾ 40 ಚಿನ್ನದೊಂದಿಗೆ ಅನುಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದೆ.

ಕೂಟದ ಕೊನೆಯ ದಿನವಾದ ಶನಿವಾರ ಭಾರತವು 6 ಚಿನ್ನ ಸೇರಿದಂತೆ 12 ಪದಕಗಳನ್ನು ಗೆದ್ದುಕೊಂಡಿತು.

ಏಷ್ಯನ್ ಗೇಮ್ಸ್ ಪದಕ ಪಟ್ಟಿ ಇಂತಿದೆ:

1. ಚೀನಾ (ಚಿನ್ನ: 198, ಬೆಳ್ಳಿ: 108, ಕಂಚು: 68, ಒಟ್ಟು: 374)

2. ಜಪಾನ್ (ಚಿನ್ನ: 50, ಬೆಳ್ಳಿ: 63, ಕಂಚು: 69, ಒಟ್ಟು: 182)

3. ರಿಪಬ್ಲಿಕ್ ಆಫ್ ಕೊರಿಯಾ (ಚಿನ್ನ: 40, ಬೆಳ್ಳಿ: 58, ಕಂಚು: 88, ಒಟ್ಟು: 186)

4. ಭಾರತ (ಚಿನ್ನ: 28, ಬೆಳ್ಳಿ: 38, ಕಂಚು: 41, ಒಟ್ಟು: 107)

5. ಉಜ್ಬೇಕಿಸ್ತಾನ (ಚಿನ್ನ: 21, ಬೆಳ್ಳಿ: 18, ಕಂಚು: 31, ಒಟ್ಟು: 70)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.