ADVERTISEMENT

ವಂತಿಕಾ, ಚಾರ್ತಿ ಸೇರಿ ಐವರಿಗೆ ಚೆಸ್‌ ಫೆಲೋಷಿಪ್

ಪಿಟಿಐ
Published 22 ಏಪ್ರಿಲ್ 2025, 15:00 IST
Last Updated 22 ಏಪ್ರಿಲ್ 2025, 15:00 IST
ಚಾರ್ವಿ ಅನಿಲಕುಮಾರ್‌
ಚಾರ್ವಿ ಅನಿಲಕುಮಾರ್‌   

ಹೈದರಾಬಾದ್‌: ಇಂಟರ್‌ನ್ಯಾಷನಲ್ ಮಾಸ್ಟರ್‌ ವಂತಿಕಾ ಅಗರವಲ್, ಕರ್ನಾಟಕದ ಚಾರ್ವಿ ಅನಿಲಕುಮಾರ್‌ ಸೇರಿದಂತೆ ಐವರು ಆಟಗಾರ್ತಿಯರನ್ನು ₹1 ಕೋಟಿ ಮೊತ್ತದ ಫೆಲೊಷಿಪ್‌ಗೆ ಮಂಗಳವಾರ ಆಯ್ಕೆ ಮಾಡಲಾಗಿದೆ.

ಭಾರತದಲ್ಲಿ ಮಹಿಳಾ ಚೆಸ್‌ಗೆ ಉತ್ತೇಜನ ನೀಡಲು ಹೈದರಾಬಾದ್ ಮೂಲದ ಪ್ರವಾಹ್ ಪ್ರತಿಷ್ಠಾನ ಮತ್ತು ಚೆಸ್‌ ಸ್ಟಾರ್ಟಪ್‌ ಎಂಜಿಡಿ1 ಸೇರಿ ಜಂಟಿಯಾಗಿ ಸ್ಥಾಪಿಸಿರುವ ‘64 ಸ್ಕ್ವೇರ್ಸ್‌’ ಸಂಸ್ಥೆ ಈ ಫೆಲೊಷಿಪ್‌ ನೀಡುತ್ತಿದೆ.

ವಂತಿಕಾ, ಮಹಿಳಾ ಫಿಡೆ ಮಾಸ್ಟರ್‌ಗಳಾದ (ಡಬ್ಲ್ಯುಎಫ್‌ಎಂ) ಶುಭಿ ಗುಪ್ತಾ, ಚಾರ್ವಿ ಜೊತೆ ಉದಯೋನ್ಮುಖ ಆಟಗಾರ್ತಿಯರಾದ ಸರಯೂ ವೆಲ್ಪುಲ ಮತ್ತು ಸಾಹಿತಿ ವರ್ಷಿಣಿ ಅವರು ಈ ಫೆಲೊಷಿಪ್‌ಗೆ ಆಯ್ಕೆಯಾಗಿದ್ದಾರೆ

ADVERTISEMENT

ಈ ಆಟಗಾರ್ತಿಯರ ತರಬೇತಿ, ಟೂರ್ನಿಯ ಪಾಲ್ಗೊಳ್ಳುವಿಕೆ, ಅವರಿಗೆ ಅಂತರರಾಷ್ಟ್ರೀಯ ಟೂರ್ನಿಗಳ ಅನುಭವ ಪಡೆಯಲು ತಗಲುವ ಒಂದು ವರ್ಷದ ಖರ್ಚುವೆಚ್ಚಗಳನ್ನು ಈ ಫೆಲೋಷಿಪ್‌ ಅಡಿ ಭರಿಸಲಾಗುತ್ತದೆ.

ವಂತಿಕಾ ಈ ಹಿಂದೆ 2023ರಲ್ಲೂ ಈ ಫೆಲೋಷಿಪ್‌ಗೆ ಆಯ್ಕೆಯಾಗಿದ್ದರು. ಅವರು ನಂತರ ಐಎಂ ಟೈಟಲ್‌ ಪಡೆದಿದ್ದರು. 2024ರ ಚೆಸ್‌ ಒಲಿಂಪಿಯಾಡ್‌ನಲ್ಲಿ ಚಿನ್ನ ಗೆದ್ದ ಮಹಿಳಾ ತಂಡದಲ್ಲಿದ್ದರು. ತಮ್ಮ ಬೋರ್ಡ್‌ನ ಉತ್ತಮ ಪ್ರದರ್ಶನಕ್ಕಾಗಿ ವೈಯಕ್ತಿಕ ಚಿನ್ನವನ್ನೂ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.