ADVERTISEMENT

ಪೃಥ್ವಿರಾಜ್‌ ಮೇಲೆ ಮೂರು ವರ್ಷ ನಿಷೇಧ

ಪಿಟಿಐ
Published 19 ನವೆಂಬರ್ 2019, 19:04 IST
Last Updated 19 ನವೆಂಬರ್ 2019, 19:04 IST
ಜೆ.ಪೃಥ್ವಿರಾಜ್‌
ಜೆ.ಪೃಥ್ವಿರಾಜ್‌   

ನವದೆಹಲಿ: ಮುಂದಿನ ಮೂರು ವರ್ಷ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ತೀರ್ಪುಗಾರರಾಗಿ ಕೆಲಸ ಮಾಡದಂತೆ ಜೆ.ಪೃಥ್ವಿರಾಜ್‌ ಮೇಲೆ, ದಿ ಫೆಡರೇಷನ್‌ ಆಫ್‌ ಮೋಟರ್ ಸ್ಪೋರ್ಟ್ಸ್‌ ಕ್ಲಬ್ಸ್‌ ಆಫ್‌ ಇಂಡಿಯಾ (ಎಫ್‌ಎಂಎಸ್‌ಸಿಐ) ಮಂಗಳವಾರ ನಿಷೇಧ ಹೇರಿದೆ.

ಸೆಪ್ಟೆಂಬರ್‌ನಲ್ಲಿ ರಾಜಸ್ಥಾನದ ಬಾರ್ಮೆರ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್‌ಷಿಪ್‌ನ ವೇಳೆ ಟ್ರ್ಯಾಕ್‌ನಲ್ಲಿ ದುರಂತ ಸಂಭವಿಸಿತ್ತು. ಗೌರವ್‌ ಗಿಲ್‌ ಅವರ ಕಾರು ಅಪಘಾತಕ್ಕೀಡಾಗಿ ಮೂವರು ಸಾವನ್ನಪ್ಪಿದ್ದರು.

ಈ ಪ್ರಕರಣದ ತನಿಖೆ ನಡೆಸಿದ್ದ ಐದು ಸದಸ್ಯರ ಸಮಿತಿ, ಆಯೋಜಕರ ನಿರ್ಲಕ್ಷದಿಂದಾಗಿ ಅವಘಡ ನಡೆದಿರುವುದಾಗಿ ಹೇಳಿದೆ. ಚಾಂಪಿಯನ್‌ಷಿಪ್‌ನಲ್ಲಿ ಸಿಒಸಿಯಾಗಿ (ಕ್ಲರ್ಕ್‌ ಆಫ್‌ ದಿ ಕೋರ್ಸ್‌) ಕೆಲಸ ಮಾಡಿದ್ದ ಪೃಥ್ವಿರಾಜ್‌ ಮೇಲೆ ನಿಷೇಧ ಹೇರಿದೆ.

ADVERTISEMENT

ಪೃಥ್ವಿರಾಜ್‌ ಅವರು ನಿಷೇಧದ ಅವಧಿ ಪೂರ್ಣಗೊಂಡ ಬಳಿಕ ಒಂದು ವರ್ಷ ಡಿಸಿಒಸಿಯಾಗಿ ಕೆಲಸ ಮಾಡಬೇಕೆಂದೂ ಸಮಿತಿ ಹೇಳಿದೆ.

ಬಾರ್ಮೆರ್‌ ರ‍್ಯಾಲಿಯ ಸಂಘಟಕರಾದ ಮ್ಯಾಕ್ಸ್‌ಪೀರಿಯನ್ಸ್‌ ಮತ್ತು ಆ ಸಂಸ್ಥೆಯ ಪ್ರತಿನಿಧಿ ಅರವಿಂದ್‌ ಬಾಲನ್‌ ಅವರ ಮೇಲೂ ಮೂರು ವರ್ಷ (ಡಿಸೆಂಬರ್‌ 31, 2022) ನಿಷೇಧ ಹೇರಲಾಗಿದೆ.

ಪೃಥ್ವಿರಾಜ್‌ ಅವರ ಕೊಯಮತ್ತೂರು ಆಟೊ ಸ್ಪೋರ್ಟ್ಸ್‌ ಕ್ಲಬ್‌ಗೆ ₹5 ಲಕ್ಷ ದಂಡ ವಿಧಿಸಲಾಗಿದೆ. ಈ ಕ್ಲಬ್‌ ಮುಂದಿನ ಮೂರು ವರ್ಷ ಕೊಯಮತ್ತೂರಿನ ಹೊರಗೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಸಂಘಟಿಸುವಂತಿಲ್ಲ ಎಂದೂ ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.