ADVERTISEMENT

ಗಾಲ್ಫ್‌: ಅದಿತಿಗೆ ಎರಡನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 22:30 IST
Last Updated 19 ಫೆಬ್ರುವರಿ 2023, 22:30 IST
ಅದಿತಿ ಅಶೋಕ್‌– ಎಎಫ್‌ಪಿ ಚಿತ್ರ
ಅದಿತಿ ಅಶೋಕ್‌– ಎಎಫ್‌ಪಿ ಚಿತ್ರ   

ಕೇಕ್‌, ಸೌದಿ ಅರೇಬಿಯಾ: ಭಾರತದ ಅದಿತಿ ಅಶೋಕ್ ಅವರು ಅಮೋಘ ಲಯ ಮಂದುವರಿಸಿದ್ದು, ಇಲ್ಲಿ ನಡೆದ ಆರಾಮ್ಕೊ ಸೌದಿ ಮಹಿಳಾ ಇಂಟರ್‌ನ್ಯಾಷನಲ್‌ ಗಾಲ್ಫ್ ಟೂರ್ನಿಯಲ್ಲಿ ಎರಡನೇ ಸ್ಥಾನ ಗಳಿಸಿದರು.

ಕರ್ನಾಟಕದ ಅದಿತಿ ಇತ್ತೀಚೆಗೆ ಕೆನ್ಯಾ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರೆ, ಮೊರೊಕ್ಕೊದಲ್ಲಿ ಮೂರನೇ ಸ್ಥಾನ ಗಳಿಸಿದ್ದರು.

ಸೌದಿ ಟೂರ್ನಿಯಲ್ಲಿ ನ್ಯೂಜಿಲೆಂಡ್‌ನ ಲಿಡಿಯಾ ಕೊ ಪ್ರಶಸ್ತಿ ಗೆದ್ದುಕೊಂಡರು. ಅದಿತಿ ಕೇವಲ ಒಂದು ಶಾಟ್‌ನಿಂದ ಹಿಂದುಳಿದರು.

ADVERTISEMENT

‘ಇದು ಅತ್ಯುತ್ತಮ ಆರಂಭ. ಇಲ್ಲಿ ಉತ್ತಮ ಸ್ಕೋರ್ ದಾಖಲಿಸಿದೆ‘ ಎಂದು ಅದಿತಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.