
ಪಿಟಿಐ
ನವದೆಹಲಿ: ತಮಿಳುನಾಡಿನ ಚೆಸ್ ಆಟಗಾರ ರಾಹುಲ್ ವಿ.ಎಸ್. ಅವರು ದೇಶದ 91ನೇ ಗ್ರ್ಯಾಂಡ್‌ಮಾಸ್ಟರ್ ಎನಿಸಿದ್ದಾರೆ. ಆರನೇ ಆಸಿಯಾನ್ ಟೂರ್ನಿಯಲ್ಲಿ ಶನಿವಾರ ಒಂದು ಸುತ್ತು ಇರುವಂತೆ ಪ್ರಶಸ್ತಿ ಗೆಲ್ಲುವ ಮೂಲಕ ಅವರು ಈ ಸಾಧನೆಗೆ ಪಾತ್ರರಾದರು.
ಹಾಲಿ ಏಷ್ಯನ್ ಜೂನಿಯರ್ ಚಾಂಪಿಯನ್ ಆಗಿರುವ 21 ವರ್ಷ ವಯಸ್ಸಿನ ರಾಹುಲ್ 2021ರಲ್ಲಿ ಐಎಂ ಆಗಿದ್ದರು. ಆಸಿಯಾನ್ ಟೂರ್ನಿಯ ಗೆಲುವಿನ ಮೂಲಕ ಅವರು ಜಿಎಂ ಆಗಲು ಅಗತ್ಯವಿದ್ದ ಅಂತಿಮ ನಾರ್ಮ್ ಕೂಡ ಪಡೆದರು. ಅಕ್ಟೋಬರ್ 30ರಂದು ಚೆನ್ನೈನ ಇಳಂಪರ್ತಿ ಎ.ಆರ್. ಅವರು ದೇಶದ 90ನೇ ಜಿಎಂ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.