ಡಿ. ಗುಕೇಶ್
(ಪಿಟಿಐ ಚಿತ್ರ)
ಹ್ಯಾಂಬರ್ಗ್: ಫ್ರೀಸ್ಟೈಲ್ ಗ್ರ್ಯಾಂಡ್ ಸ್ಲಾಮ್ ಚೆಸ್ ಟೂರ್ನಿಯಲ್ಲಿ ಮಗದೊಂದು ಸೋಲು ಕಂಡಿರುವ ವಿಶ್ವ ಚಾಂಪಿಯನ್, ಭಾರತದ ಡಿ. ಗುಕೇಶ್ ಹೊರಬಿದ್ದಿದ್ದಾರೆ.
ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧ ಸತತ ಎರಡನೇ ಬಾರಿ ಸೋಲು ಕಂಡಿರುವ ಗುಕೇಶ್ ಕನಸು ಭಗ್ನಗೊಂಡಿದೆ.
ಬಿಳಿಕಾಯಿಯೊಂದಿಗೆ ಮೊದಲ ಪಂದ್ಯ ಸೋತಿದ್ದ ಗುಕೇಶ್, ಗೆಲ್ಲಲೇಬೇಕಾದ ನಿರ್ಣಾಯಕ ಪಂದ್ಯದಲ್ಲೂ ಹಿನ್ನಡೆ ಅನುಭವಿಸಿದರು.
ಗುಕೇಶ್ ಇದೀಗ ಕೊನೆಯ ನಾಲ್ಕು ಸ್ಥಾನಗಳಿಗಾಗಿ ಪೈಪೋಟಿ ನಡೆಸಲಿದ್ದಾರೆ.
ಇದೇ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧವೂ ಗುಕೇಶ್ ಪರಾಭವಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.