ADVERTISEMENT

ಚೆಸ್‌ | ರ್‍ಯಾಪಿಡ್‌ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದ ಗುಕೇಶ್‌

ಪಿಟಿಐ
Published 6 ಜುಲೈ 2025, 0:13 IST
Last Updated 6 ಜುಲೈ 2025, 0:13 IST
<div class="paragraphs"><p>ಗುಕೇಶ್‌</p></div>

ಗುಕೇಶ್‌

   

ಪಿಟಿಐ ಸಂಗ್ರಹ ಚಿತ್ರ

ಝಾಗ್ರೆಬ್‌ (ಕ್ರೊವೇಷ್ಯಾ): ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಸೂಪರ್ ಯುನೈಟೆಡ್‌ ರ‍್ಯಾಪಿಡ್ ಮತ್ತು ಬ್ಲಿಟ್ಝ್‌ ಟೂರ್ನಿಯಲ್ಲಿ ರ‍್ಯಾಪಿಡ್‌ ವಿಭಾಗದಲ್ಲಿ ಕೊನೆಯ ಸುತ್ತಿನಲ್ಲಿ ಅಮೆರಿಕದ ವೆಸ್ಲಿ ಸೊ ಅವರನ್ನು ಸೋಲಿಸಿದರು. ಈ ವಿಭಾಗದಲ್ಲಿ ಭಾರತದ ಆಟಗಾರ ಅಗ್ರಸ್ಥಾನ ಪಡೆದರು.

ADVERTISEMENT

ಈ ಟೂರ್ನಿಯು ಗ್ರ್ಯಾಂಡ್‌ ಚೆಸ್‌ ಟೂರ್‌ನ ಭಾಗವಾಗಿದೆ. ಮೂರನೇ ಹಾಗೂ ಕೊನೆಯ ದಿನವಾದ ಶುಕ್ರವಾರ ಎರಡು ಪಂದ್ಯಗಳನ್ನು (ಹಾಲೆಂಡ್‌ನ ಅನಿಶ್‌ ಗಿರಿ ಮತ್ತು ಕ್ರೊವೇಷ್ಯಾದ  ಇವಾನ್‌ ಸರಿಕ್‌ ಜೊತೆ) ಡ್ರಾ ಮಾಡಿಕೊಂಡ ಗುಕೇಶ್‌, ಕೊನೆಯ ಪಂದ್ಯದಲ್ಲಿ ಜಯಗಳಿಸಿ ಗರಿಷ್ಠ 18ರಲ್ಲಿ 14 ಪಾಯಿಂಟ್ಸ್ ಗಳಿಸಿ ಗಮನಸೆಳೆದರು.

ರ್‍ಯಾಪಿಡ್‌ನಲ್ಲಿ ಅವರು ಎರಡು ಡ್ರಾ, ಆರು ಗೆಲುವು, ಒಂದು ಸೊಲಿನೊಡನೆ ಅಗ್ರಸ್ಥಾನ ಗಳಿಸಿದರು. ಇನ್ನು ಬ್ಲಿಟ್ಝ್‌ ಸುತ್ತಿನ ಪಂದ್ಯಗಳು ಬಾಕಿವುಳಿದಿವೆ.

ಭಾರತದ ಪ್ರಜ್ಞಾನಂದ ಅವರು ಸರಿಕ್‌ ಅವರನ್ನು ಸೋಲಿಸಿದರು. ವೆಸ್ಲಿ ಮತ್ತು ಯಾನ್‌ ಕ್ರಿಸ್ಟೋಫ್‌ ಡುಡಾ ಜೊತೆ ಡ್ರಾ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.