ADVERTISEMENT

ಹ್ಯಾಂಡ್‌ಬಾಲ್‌: ಫ್ರಾನ್ಸ್‌ಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 19:26 IST
Last Updated 8 ಆಗಸ್ಟ್ 2021, 19:26 IST

ಟೋಕಿಯೊ (ಎಎಫ್‌ಪಿ): ಫ್ರಾನ್ಸ್‌ ತಂಡವು ಮಹಿಳೆಯರ ಹ್ಯಾಂಡ್‌ಬಾಲ್‌ ಸ್ಪರ್ಧೆಯ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿತು.

ಫೈನಲ್‌ನಲ್ಲಿ ಫ್ರಾನ್ಸ್‌ 30–25ರಿಂದ ರಷ್ಯಾ ತಂಡವನ್ನು ಸೋಲಿಸಿತು.

ಉಭಯ ತಂಡಗಳು ಆರಂಭದಿಂದಲೇ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ 16–16 ಸಮಬಲ ಕಂಡುಬಂದಿತ್ತು. ನಂತರ ಸತತ ಆರು ಗೋಲುಗಳನ್ನು ದಾಖಲಿಸಿದ ಫ್ರಾನ್ಸ್‌ ವನಿತೆಯರು ಮಿಂಚಿದರು. ಈ ತಂಡದ ಗೋಲ್‌ಕೀಪರ್‌ ಕ್ಲಿಯೋಪಾತ್ರ ಡಾರ್ಲಿಯುಕ್ಸ್‌ ಕೂಡ ಮೋಡಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.