ನವದೆಹಲಿ: ಅನುಭವಿ ಡ್ರ್ಯಾಗ್ ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ ಅವರು ಇದೇ 15ರಂದು ಆರಂಭವಾಗುವ ನಾಲ್ಕು ಪಂದ್ಯಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಪುರುಷರ ಹಾಕಿ ತಂಡವನ್ನು ಮುನ್ನಡೆಸಲಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸಕ್ಕೆ 24 ಆಟಗಾರರ ತಂಡವನ್ನು ಸೋಮವಾರ ಹಾಕಿ ಇಂಡಿಯಾ ಪ್ರಕಟಿಸಿದೆ. ಕರ್ನಾಟಕದ ಯುವ ಡಿಫೆಂಡರ್ ಪೂವಣ್ಣ ಸಿ.ಬಿ. ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತದ ಆತಿಥ್ಯದಲ್ಲಿ ಆಗಸ್ಟ್ 29ರಿಂದ ರಾಜ್‌ಗಿರ್‌ನಲ್ಲಿ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಇದು ಮುಂದಿನ ವಿಶ್ವಕಪ್‌ಗೆ ಕ್ವಾಲಿಫೈಯರ್ ಕೂಡ ಆಗಿರುವುದರಿಂದ ತಂಡಕ್ಕೆ ಪೂರ್ವತಯಾರಿಯ ನಿಟ್ಟಿನಲ್ಲಿ ಈ ಪ್ರವಾಸ ಹೆಚ್ಚಿನ ಮಹತ್ವ ಪಡೆದಿದೆ.
‘ಬಿಹಾರದಲ್ಲಿ ನಡೆಯಲಿರುವ ಏಷ್ಯಾಕಪ್‌ಗೆ ಮುಂಚಿತವಾಗಿ ತಂಡವು ಪರ್ತ್‌ಗೆ ತೆರಳುತ್ತಿದೆ. ಉತ್ತಮ ತರಬೇತಿ ಮತ್ತು ಅಭ್ಯಾಸ ಪಂದ್ಯಗಳ ಮೂಲಕ ತಂಡದ ಸಮತೋಲನ ಮತ್ತು ತಾಂತ್ರಿಕ ನಿರ್ವಹಣೆಯನ್ನು ಸುಧಾರಿಸುವತ್ತ ಗಮನ ಹರಿಸಲಾಗುವುದು’ ಎಂದು ಮುಖ್ಯ ಕೋಚ್ ಕ್ರೇಗ್ ಫುಲ್ಟನ್ ಹೇಳಿದ್ದಾರೆ.
ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಕ್ಯಾಂಪಸ್‌ನಲ್ಲಿ ತರಬೇತಿ ಪಡೆಯುತ್ತಿರುವ ತಂಡವು ಶುಕ್ರವಾರ ಆಸ್ಟ್ರೇಲಿಯಾಕ್ಕೆ ತೆರಳಲಿದೆ. ನಾಲ್ಕು ಪಂದ್ಯಗಳು ಪರ್ತ್‌ನಲ್ಲೇ ನಡೆಯಲಿವೆ.
ತಂಡ ಹೀಗಿದೆ: ಗೋಲ್‌ಕೀಪರ್: ಕ್ರಿಶನ್ ಬಿ. ಪಾಠಕ್, ಸೂರಜ್ ಕರ್ಕರ್.
ಡಿಫೆಂಡರ್ಸ್: ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಸುಮಿತ್, ಜರ್ಮನ್‌ಪ್ರೀತ್ ಸಿಂಗ್, ಸಂಜಯ್, ಅಮಿತ್ ರೋಹಿದಾಸ್, ನೀಲಂ ಸಂಜೀಪ್, ಜುಗರಾಜ್ ಸಿಂಗ್, ಪೂವಣ್ಣ ಸಿ.ಬಿ.
ಮಿಡ್‌ಫೀಲ್ಡರ್ಸ್: ರಾಜಿಂದರ್ ಸಿಂಗ್, ರಾಜ್ ಕುಮಾರ್ ಪಾಲ್, ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ರವಿಚಂದ್ರ ಸಿಂಗ್, ವಿಷ್ಣು ಕಾಂತ್ ಸಿಂಗ್.
ಫಾರ್ವರ್ಡ್ಸ್: ಮನ್‌ದೀಪ್ ಸಿಂಗ್, ಶಿಲಾನಂದ್ ಲಾಕ್ರಾ, ಅಭಿಷೇಕ್, ಸುಖಜೀತ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಸೆಲ್ವಂ ಕಾರ್ತಿ, ಆದಿತ್ಯ ಲಾಲಾಗೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.