ADVERTISEMENT

ಹಾಕಿ; ಫೆ.10ರಿಂದ ಎಫ್‌ಐಎಚ್ ಪ್ರೊ ಲೀಗ್ ಟೂರ್ನಿ: ಭಾರತ ತಂಡಕ್ಕೆ ಹರ್ಮನ್‌ ಸಾರಥ್ಯ

ಪಿಟಿಐ
Published 2 ಫೆಬ್ರುವರಿ 2024, 14:15 IST
Last Updated 2 ಫೆಬ್ರುವರಿ 2024, 14:15 IST
ಹರ್ಮನ್‌ಪ್ರೀತ್‌ ಸಿಂಗ್‌
ಹರ್ಮನ್‌ಪ್ರೀತ್‌ ಸಿಂಗ್‌   

ನವದೆಹಲಿ : ಡಿಫೆಂಡರ್‌ ಹರ್ಮನ್‌ಪ್ರೀತ್‌ ಸಿಂಗ್‌ ಅವರು ಇದೇ 10ರಂದು ಆರಂಭವಾಗುವ ಎಫ್‌ಐಎಚ್ ಪ್ರೊ ಲೀಗ್ ಟೂರ್ನಿಯಲ್ಲಿ ಭಾರತದ ಪುರುಷರ ಹಾಕಿ ತಂಡವನ್ನು ಮುನ್ನಡೆಸಲಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತ ತಂಡದ ಸಿದ್ಧತೆಗೆ ಇದು ವೇದಿಕೆಯಾಗಿದೆ.

ಎರಡು ಲೆಗ್‌ನಲ್ಲಿ ನಡೆಯುವ ಟೂರ್ನಿಗೆ 24 ಆಟಗಾರರ ಭಾರತ ತಂಡವನ್ನು ಹಾಕಿ ಇಂಡಿಯಾ ಗುರುವಾರ ಪ್ರಕಟಿಸಿದೆ. ಮಿಡ್‌ಫೀಲ್ಡರ್ ಹಾರ್ದಿಕ್ ಸಿಂಗ್ ತಂಡದ ಉಪನಾಯಕರಾಗಿದ್ದಾರೆ.

ಭುವನೇಶ್ವರ ಲೆಗ್‌ ಫೆ.10ರಿಂದ ಫೆ.16ರವರೆಗೆ ಮತ್ತು ರೂರ್ಕೆಲಾ ಲೆಗ್‌ ಫೆ.19ರಿಂದ 25ರವರೆಗೆ ನಡೆಯಲಿದೆ. ಎರಡೂ ಲೆಗ್‌ಗಳಲ್ಲಿ ಭಾರತವು ಐರ್ಲೆಂಡ್, ನೆದರ್ಲೆಂಡ್ಸ್, ಸ್ಪೇನ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಭಾರತವು ಫೆ.10ರಂದು ಸ್ಪೇನ್‌ ವಿರುದ್ಧ ಅಭಿಯಾನ ಆರಂಭಿಸಲಿದೆ.

ADVERTISEMENT

ತಂಡ ಹೀಗಿದೆ: ಗೋಲ್‌ ಕೀಪರ್ಸ್‌: ಪಿ.ಆರ್.ಶ್ರೀಜೇಶ್, ಕ್ರಿಶನ್ ಬಹದ್ದೂರ್ ಪಾಠಕ್.

ಡಿಫೆಂಡರ್ಸ್‌: ಹರ್ಮನ್‌ಪ್ರೀತ್‌ ಸಿಂಗ್‌ (ನಾಯಕ), ಜರ್ಮನ್‌ಪ್ರೀತ್ ಸಿಂಗ್‌, ಸುಮಿತ್‌, ಜುಗರಾಜ್ ಸಿಂಗ್, ಅಮಿತ್‌ ರೋಹಿದಾಸ್‌, ವರುಣ್ ಕುಮಾರ್, ಸಂಜಯ್‌, ವಿಷ್ಣುಕಾಂತ್ ಸಿಂಗ್.

ಮಿಡ್‌ಫೀಲ್ಡರ್ಸ್‌: ಹಾರ್ದಿಕ್ ಸಿಂಗ್‌ (ಉಪನಾಯಕ), ವಿವೇಕ್ ಸಾಗರ್ ಪ್ರಸಾದ್, ಮನ್‌ಪ್ರೀತ್ ಸಿಂಗ್, ನೀಲಕಂಠ ಶರ್ಮಾ, ಶಂಷೇರ್‌ ಸಿಂಗ್‌, ರಾಜಕುಮಾರ್ ಪಾಲ್, ರವಿಚಂದ್ರ ಸಿಂಗ್ ಮೊಯಿರಂಗ್ಧೆಮ್.

ಫಾರ್ವರ್ಡ್ಸ್‌: ಲಲಿತ್‌ ಕುಮಾರ್ ಉಪಾಧ್ಯಾಯ, ಮನದೀಪ್ ಸಿಂಗ್, ಗುರ್ಜಂತ್‌ ಸಿಂಗ್‌, ಸುಖಜೀತ್ ಸಿಂಗ್, ಅಭಿಷೇಕ್, ಅಕ್ಷದೀಪ್ ಸಿಂಗ್, ಅರಿಜಿತ್ ಸಿಂಗ್ ಹುಂಡಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.