ADVERTISEMENT

ಡ್ರ್ಯಾಗ್ ರೇಸಿಂಗ್‌: ಎರಡು ಚಿನ್ನ ಗೆದ್ದು ದಾಖಲೆ ಸೃಷ್ಟಿಸಿದ ಕೊಡಗಿನ ಹೇಮಂತ್‌

ಪಿಟಿಐ
Published 3 ಅಕ್ಟೋಬರ್ 2021, 13:01 IST
Last Updated 3 ಅಕ್ಟೋಬರ್ 2021, 13:01 IST
ಹೇಮಂತ್ ಮುದ್ದಪ್ಪ
ಹೇಮಂತ್ ಮುದ್ದಪ್ಪ   

ಚೆನ್ನೈ: ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಏಳು ಬಾರಿ ಚಿನ್ನ ಗೆದ್ದಿರುವ ಕೊಡಗಿನ ಹೇಮಂತ್ ಮುದ್ದಪ್ಪ ಇಲ್ಲಿ ನಡೆಯುತ್ತಿರುವ ಎಂಎಸ್‌ಎಸ್‌ಸಿ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ಡ್ರ್ಯಾಗ್ ರೇಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ದಾಖಲೆ ನಿರ್ಮಿಸಿದರು.

ಎರಡನೇ ಸುತ್ತಿನ ಸ್ಪರ್ಧೆಯಲ್ಲಿ ಅವರು ಎರಡು ಚಿನ್ನ ಗೆಲ್ಲುವುದರೊಂದಿಗೆ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. 4 ಸ್ಟ್ರೋಕ್ 850ರಿಂದ1050 ಸಿಸಿ ಸೂಪರ್ ಸ್ಪೋರ್ಟ್ ಕ್ಲಾಸ್‌ನಲ್ಲಿ 2019ರಲ್ಲಿ ಅವರು ದಾಖಲೆ ಬರೆದಿದ್ದರು. 1051 ಸಿಸಿಗೂ ಮೇಲಿನ ವಿಭಾಗದ ದಾಖಲೆಯೂ ಅವರ ಹೆಸರಿನಲ್ಲಿದೆ.ಬೆಂಗಳೂರಿನಲ್ಲಿ ನೆಲೆಸಿರುವ 31 ವರ್ಷದ ಹೇಮಂತ್‌ ಅವರು ಮದ್ರಾಸ್ ಮೋಟರ್ ರೇಸ್ ಟ್ರ್ಯಾಕ್‌ನಲ್ಲಿ ಅವರು ತಾಸಿಗೆ 230 ಕಿಮೀ ವೇಗದಲ್ಲಿ ವಾಹನ ಮುನ್ನುಗ್ಗಿಸಿದರು.

7.914 ಸೆಕೆಂಡುಗಳ ಅಂತರದಲ್ಲಿ ಹೇಮಂತ್ ಚಿನ್ನ ಗೆದ್ದರೆ ಐದರಾಬಾದ್‌ನ ಮೊಹಮ್ಮದ್ ರಿಯಾಜ್ 8.058 ಸೆಕೆಂಡುಗಳ ಅಂತರದಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟುಕೊಂಡರು. ಬೆಂಗಳೂರಿನ ಸುಗನ್ ಪ್ರಸಾದ್ (8.421) ಕಂಚಿನ ಪದಕ ಗೆದ್ದುಕೊಂಡರು.

ADVERTISEMENT

ಏಳು ಬಾರಿ ಚಾಂಪಿಯನ್ ಆಗುವುದು ಸುಲಭ ಸಾಧ್ಯವಲ್ಲ. ಕಠಿಣ ಪರಿಶ್ರಮ ಮತ್ತು ಸತತ ಅಭ್ಯಾಸದಿಂದ ಅದು ಸಾಧ್ಯವಾಗಿದೆ. ಇದೀಗ ದಾಖಲೆಯೂ ಆಗಿದೆ. ಇದರಿಂದ ತುಂಬ ಖುಷಿಯಾಗಿದೆ’ ಎಂದು ಹೇಮಂತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.