ರಾಜಗೀರ್: ಇದೇ ಶುಕ್ರವಾರ (ಆಗಸ್ಟ್ 29) ಆರಂಭಗೊಳ್ಳಲಿರುವ ಏಷ್ಯಾ ಕಪ್ ಹಾಕಿ ಟೂರ್ನಿಯ ಎಲ್ಲ ಪಂದ್ಯಗಳಿಗೂ ಪ್ರೇಕ್ಷಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಸಾರ್ವಜನಿಕರು www.ticketgenie.in ವೆಬ್‌ಸೈಟ್ ಅಥವಾ ಹಾಕಿ ಇಂಡಿಯಾ ಮೊಬೈಲ್ ಆ್ಯಪ್ ಮುಖಾಂತರ ಉಚಿತ ಪಾಸ್‌ಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ‘ಹಾಕಿ ಇಂಡಿಯಾ’ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಆತಿಥೇಯ ಭಾರತ, ಜಪಾನ್, ಚೀನಾ, ಕಜಾಕಸ್ತಾನ, ಮಲೇಷ್ಯಾ, ಕೊರಿಯಾ, ಬಾಂಗ್ಲಾದೇಶ ಹಾಗೂ ಚೀನಾ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಭಾರತ ತಂಡವು ಎ ಗುಂಪಿನಲ್ಲಿದ್ದು, ಶುಕ್ರವಾರ ಚೀನಾ ಎದುರು ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.