ಬೆಂಗಳೂರು: ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಎಸ್‌ಎಐ) ಹಾಕಿ ತರಬೇತುದಾರರಾಗಿ ನಿವೃತ್ತರಾಗಿದ್ದ ಚೇಂದಂಡ ಅಶ್ವತ್ಥ್ ಅವರು ಹೃದಯಘಾತದಿಂದ ಸೋಮವಾರ ಮೃತಪಟ್ಟರು.
ಉತ್ತರಪ್ರದೇಶದ ಗ್ವಾಲಿಯರ್‌ನಲ್ಲಿ ಬಿ.ಪಿ.ಇಡಿ ಹಾಗೂ ಎಂ.ಪಿ.ಇಡಿ ಪದವಿ ಶಿಕ್ಷಣ ಪಡೆದಿದ್ದ ಇವರು, ರಾಷ್ಟ್ರೀಯ ಕ್ರೀಡಾ ಸಂಸ್ಥೆಯಿಂದ (ಎನ್‌ಐಎಸ್) ಕ್ರೀಡಾ ತರಬೇತುದಾರ ಡಿಪ್ಲೊಮಾ ಪದವಿ ಪಡೆದಿದ್ದರು. ಬೆಂಗಳೂರಿನಲ್ಲಿರುವ ಎಸ್‌ಐಎ ತರಬೇತಿ ಕೇಂದ್ರದಲ್ಲಿ ದಶಕಗಳ ಕಾಲ ಹಾಕಿ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.