ADVERTISEMENT

ಬೆಲ್ಜಿಯಂ ಹೇಳಿಕೆಗಳಿಗೆ ಹಾಕಿ ಇಂಡಿಯಾ ಆಕ್ರೋಶ

ಪಿಟಿಐ
Published 13 ಅಕ್ಟೋಬರ್ 2021, 19:31 IST
Last Updated 13 ಅಕ್ಟೋಬರ್ 2021, 19:31 IST
ಭಾರತ ಮಹಿಳಾ ಹಾಕಿ ತಂಡ
ಭಾರತ ಮಹಿಳಾ ಹಾಕಿ ತಂಡ   

ನವದೆಹಲಿ: ಭಾರತ ಹಾಕಿ ತಂಡದ ಆಟಗಾರರು ಈ ಬಾರಿ ಎಫ್‌ಐಎಚ್‌ ಪ್ರಶಸ್ತಿಗಳಲ್ಲಿ ಸಿಂಹಪಾಲು ಪಡೆದಿರುವ ಕುರಿತು ಬೆಲ್ಜಿಯಂ ವ್ಯಕ್ತಪಡಿಸಿರುವ ಸಾರ್ವಜನಿಕ ಅಭಿಪ್ರಾಯಗಳು ಜನಾಂಗೀಯ ತಾರತಮ್ಯವನ್ನು ಬಿಂಬಿಸುತ್ತವೆ ಎಂದು ಹಾಕಿ ಇಂಡಿಯಾ
ಖಂಡಿಸಿದೆ.

‘ಭಾರತದ ಪ್ರಶಸ್ತಿ ವಿಜೇತರ ಕುರಿತು ಬೆಲ್ಜಿಯಂ ಅಸಮಾಧಾನ ವ್ಯಕ್ತಪಡಿಸಿದೆ. ಇದು ಕ್ರೀಡಾ ಸ್ಪೂರ್ತಿಗೆ ವಿರುದ್ಧವಾಗಿದೆ. ಪ್ರಶಸ್ತಿ ವಿಜೇತರನ್ನು ಅವಮಾನಿಸಲಾಗಿದೆ. ಅಲ್ಲದೇ ಹಾಕಿ ಕ್ರೀಡೆಗೂ ಇದು ಅವಮಾನಿಸಿದಂತಾಗಿದೆ’ ಎಂದು ಹಾಕಿ ಇಂಡಿಯಾ ಅಧ್ಯಕ್ಷ
ಗ್ಯಾನೆಂದ್ರೊ ನಿಂಗೊಂಬಮ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT