ADVERTISEMENT

ಹಾಕಿ ದಂತಕತೆ ಬಲ್ಬೀರ್‌ ಸಿಂಗ್‌ ನಿಧನ

ಏಜೆನ್ಸೀಸ್
Published 25 ಮೇ 2020, 3:37 IST
Last Updated 25 ಮೇ 2020, 3:37 IST
ಹಾಕಿ ದಂತಕತೆ ಬಲ್ಬೀರ್‌ ಸಿಂಗ್‌ ಸೀನಿಯರ್ ಅವರ ಸಂಗ್ರಹ ಚಿತ್ರ
ಹಾಕಿ ದಂತಕತೆ ಬಲ್ಬೀರ್‌ ಸಿಂಗ್‌ ಸೀನಿಯರ್ ಅವರ ಸಂಗ್ರಹ ಚಿತ್ರ   

ಚಂಡೀಗಡ: ಒಲಿಂಪಿಯನ್ ಹಾಕಿಪಟು ಬಲ್ಬೀರ್ ಸಿಂಗ್ ಸೀನಿಯರ್ (96) ಅವರು ಸೋಮವಾರ ಪಂಜಾಬ್‌ನ ಮೊಹಾಲಿಯ ಆಸ್ಪತ್ರೆಯಲ್ಲಿನಿಧನರಾದರು.ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮೇ 10ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರಿಗೆಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಮೇ 12ರಂದು ಅವರಿಗೆಹೃದಯಸ್ತಂಭನವಾಗಿತ್ತು. ಅಂದು ತಡರಾತ್ರಿ ಮತ್ತೆಹೃದಯ ತೊಂದರೆ ತೀವ್ರಗೊಂಡಿತ್ತು.

ಆಧುನಿಕ ಒಲಿಂಪಿಕ್‌ ಇತಿಹಾಸದ 16 ದಂತಕತೆಗಳಲ್ಲಿ ಒಬ್ಬರು ಎಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಬಲ್ಬೀರ್ ಸಿಂಗ್ ಅವರನ್ನು ಆಯ್ಕೆ ಮಾಡಿದ್ದು, ಈ ಗೌರವ ಪಡೆದ ಏಕಮಾತ್ರ ಭಾರತೀಯ ಎಂಬ ಹೆಗ್ಗಳಿಕೆ ಅವರದ್ದು.ಭಾರತ ತಂಡವು ಮೂರು ಸಲ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಾಗ ಅವರು ಆಡಿದ್ದರು.1948ರಲ್ಲಿ ಲಂಡನ್‌ನಲ್ಲಿಹಾಗೂ 1952ರಲ್ಲಿ ಹೆಲ್ಸಿಂಕಿಯಲ್ಲಿ (ಫಿನ್‌ಲ್ಯಾಂಡ್),1956ರ ಮೆಲ್ಬರ್ನ್‌ನಲ್ಲಿ‌ (ಆಸ್ಟ್ರೇಲಿಯಾ)ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟಗಳಲ್ಲಿ ಚಿನ್ನ ಗೆದ್ದ ಭಾರತ ಹಾಕಿ ತಂಡದಲ್ಲಿದ್ದರು.ಮೆಲ್ಬರ್ನ್‌ಒಲಿಂಪಿಕ್ಸ್‌ನಲ್ಲಿ ಸಿಂಗ್‌ ಅವರುತಂಡ ಮುನ್ನಡೆಸಿದ್ದರು

ADVERTISEMENT

ಒಲಿಂಪಿಕ್ಸ್‌ ಪುರುಷರ ಹಾಕಿ ಫೈನಲ್‌ನಲ್ಲಿ ಅತಿ ಹೆಚ್ಚಿನ ವೈಯಕ್ತಿಕ ಗೋಲು ಬಾರಿಸಿರುವ ದಾಖಲೆಯೂ ಅವರ ಹೆಸರಿನಲ್ಲಿ ಉಳಿದಿದೆ. 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನ ಫೈನಲ್ಸ್‌ನಲ್ಲಿ ಭಾರತ 6–1 ರಿಂದ ನೆದರ್ಲೆಂಡ್ಸ್‌ ತಂಡವನ್ನು ಸದೆಬಡಿದ ಸಂದರ್ಭದಲ್ಲಿ ಬಲ್ಬೀರ್‌ ಐದು ಗೋಲುಗಳನ್ನು ಗಳಿಸಿದ್ದರು. 1975ರಲ್ಲಿ ಭಾರತ ಏಕೈಕ ವಿಶ್ವಕಪ್‌ ಹಾಕಿ ಕಿರೀಟ ಗೆದ್ದ ಸಂದರ್ಭದಲ್ಲಿ ಅವರು ತಂಡದ ಮ್ಯಾನೇಜರ್‌ ಆಗಿದ್ದರು.

1957ರಲ್ಲಿ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.