ADVERTISEMENT

ಹಾಕಿ: ನಿತಿನ್ ತಿಮ್ಮಯ್ಯ ಹ್ಯಾಟ್ರಿಕ್‌

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 18:57 IST
Last Updated 11 ಜುಲೈ 2022, 18:57 IST
ಪೋಸ್ಟಲ್ ತಂಡದ ಉತ್ತಪ್ಪ (ಎಡ) ಮತ್ತು ಕಸ್ಟಮ್ಸ್ ಮತ್ತು ಜಿಎಸ್‌ಟಿ ತಂಡದ ಮುತ್ತಣ್ಣ ನಡುವೆ ಚೆಂಡಿಗಾಗಿ ಪೈಪೋಟಿ– ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್‌
ಪೋಸ್ಟಲ್ ತಂಡದ ಉತ್ತಪ್ಪ (ಎಡ) ಮತ್ತು ಕಸ್ಟಮ್ಸ್ ಮತ್ತು ಜಿಎಸ್‌ಟಿ ತಂಡದ ಮುತ್ತಣ್ಣ ನಡುವೆ ಚೆಂಡಿಗಾಗಿ ಪೈಪೋಟಿ– ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್‌   

ಬೆಂಗಳೂರು: ನಿತಿನ್ ತಿಮ್ಮಯ್ಯ ಗಳಿಸಿದ ಹ್ಯಾಟ್ರಿಕ್ ಗೋಲುಗಳ ಬಲದಿಂದ ಅಕೌಂಟಂಟ್‌ ಜನರಲ್ ಆಫೀಸ್‌ ರಿಕ್ರಿಯೇಷನ್ ಕ್ಲಬ್‌ (ಎಜಿಒಆರ್‌ಸಿ) ತಂಡವು ಹಾಕಿ ಕರ್ನಾಟಕ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಜಯ ಗಳಿಸಿತು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿಎಜಿಒಆರ್‌ಸಿ 6–1ರಿಂದ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ತಂಡಕ್ಕೆ ಸೋಲುಣಿಸಿತು. ನಿತಿನ್‌ ಎಂಟು, 23 ಮತ್ತು 54ನೇ ನಿಮಿಷಗಳಲ್ಲಿ ಕೈಚಳಕ ತೋರಿದರು. ವಿಜೇತ ತಂಡಕ್ಕಾಗಿ ಜಯಪ್ರಕಾಶ್‌ (17ನೇ ನಿಮಿಷ), ಚಂಗಪ್ಪ (20ನೇ ನಿ.) ಮತ್ತು ಶಂಕರ್ ಪಾಟೀಲ್‌ (38ನೇ ನಿ.) ಗೋಲು ಗಳಿಸಿದರು. ಸಾಯ್ ಪರ ಚೇತನ್‌ ಎಂ.ಕೆ. (35ನೇ ನಿ.) ಗೋಲು ದಾಖಲಿಸಿದರು.

ಮತ್ತೊಂದು ಪಂದ್ಯದಲ್ಲಿ ಪೋಸ್ಟಲ್ ತಂಡವು 3–3ರಿಂದ ಕಸ್ಟಮ್ಸ್ ಮತ್ತು ಜಿಎಸ್‌ಟಿ ತಂಡದೊಂದಿಗೆ ಡ್ರಾ ಸಾಧಿಸಿತು. ಪೋಸ್ಟಲ್ ಪರ ಪೂವಣ್ಣ ಐ.ಎ. (ಏಳು ಮತ್ತು 21ನೇ ನಿ.), ಚೇತನ್ ಚಿನ್ನಪ್ಪ (43ನೇ ನಿ.) ಮಿಂಚಿದರು.ಕಸ್ಟಮ್ಸ್ ಮತ್ತು ಜಿಎಸ್‌ಟಿ ತಂಡದ ತಿಮ್ಮಣ್ಣ ಪಿ.ಎಲ್‌. (27ನೇ ನಿ.), ವಿನಯ್ ವಿ.ಎಸ್‌. (45ನೇ ನಿ.) ಮತ್ತು ಚೆಲ್ಸಿ ಮೇದಪ್ಪ (49ನೇ ನಿ.) ಗೋಲು ಹೊಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.