ADVERTISEMENT

ಹಾಕಿ: ಐಒಸಿಎಲ್‌ ಮುಡಿಗೆ ಗರಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 19:45 IST
Last Updated 12 ಡಿಸೆಂಬರ್ 2019, 19:45 IST
ಪ್ರಶಸ್ತಿ ಗೆದ್ದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಐಒಸಿಎಲ್‌) ತಂಡ. (ಮುಂದಿನ ಸಾಲು; ಎಡದಿಂದ) ರೋಷನ್‌ ಮಿಂಜ್‌, ಕೊಥಾಜಿತ್‌ ಸಿಂಗ್‌, ಅರ್ಮಾನ್‌ ಖುರೇಷಿ, ಹಾರ್ದಿಕ್‌ ಸಿಂಗ್‌, ವಿಕ್ರಂಜೀತ್‌ ಸಿಂಗ್‌, ವಿಕ್ರಂ ಕಾಂತ್‌, ಮನಪ್ರೀತ್‌, ದಿಲ್‌ಪ್ರೀತ್‌ ಸಿಂಗ್‌ ಮತ್ತು ಸುನಿಲ್‌ ಯಾದವ್‌. (ಹಿಂದಿನ ಸಾಲು) ಭರತ್‌ ಚಿಕಾರ, ಸಿಮ್ರನ್‌ಜೀತ್‌ ಸಿಂಗ್‌, ಎಸ್‌.ಕೆ.ಉತ್ತಪ್ಪ, ಪಂಕಜ್‌ ರಜಾಕ್‌, ಗುರ್ಜಿಂದರ್‌ ಸಿಂಗ್‌, ದೀಪಕ್‌ ಠಾಕೂರ್‌ (ಕೋಚ್‌), ದೇವೇಶ್‌ ಚೌಹಾಣ್‌ (ಮ್ಯಾನೇಜರ್‌), ವಿ.ಆರ್‌.ರಘುನಾಥ್‌, ಕೃಷ್ಣ ಬಿ.ಪಾಠಕ್‌, ಗುರ್ಜಿಂದರ್‌ ಸಿಂಗ್‌ ಮತ್ತು ತಲ್ವಿಂದರ್‌ ಸಿಂಗ್‌ –ಪ್ರಜಾವಾಣಿ ಚಿತ್ರ

ಬೆಂಗಳೂರು: ಗುರ್ಜಿಂದರ್‌ ಸಿಂಗ್‌ ಅವರ ‘ಹ್ಯಾಟ್ರಿಕ್‌’ ಗೋಲುಗಳ ಬಲದಿಂದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಐಒಸಿಎಲ್‌) ತಂಡ ಪೆಟ್ರೋಲಿಯಂ ಸ್ಪೋರ್ಟ್ಸ್ ‍ಪ್ರೊಮೋಷನ್‌ ಬೋರ್ಡ್‌ (ಪಿಎಸ್‌ಪಿಬಿ) ಆಶ್ರಯದ ಅಂತರ ಘಟಕ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ.

ಶಾಂತಿನಗರದಲ್ಲಿರುವ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ (ಕೆಎಸ್‌ಎಚ್‌ಎ) ಅಂಗಳದಲ್ಲಿ ಗುರುವಾರ ನಡೆದ ಫೈನಲ್‌ನಲ್ಲಿ ಐಒಸಿಎಲ್‌ 7–3 ಗೋಲುಗಳಿಂದ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ತಂಡವನ್ನು ಮಣಿಸಿತು.

ಗುರ್ಜಿಂದರ್‌ ಅವರು 14, 36 ಮತ್ತು 42ನೇ ನಿಮಿಷಗಳಲ್ಲಿ ಗೋಲು ಬಾರಿಸಿ ‘ಹ್ಯಾಟ್ರಿಕ್‌’ ಪೂರೈಸಿದರು. ದಿಲ್‌ಪ್ರೀತ್‌ ಸಿಂಗ್‌ (15), ವಿಕ್ರಂ ಕಾಂತ್‌ (15), ಭರತ್‌ ಚಿಕಾರ (39) ಮತ್ತು ಹಾರ್ದಿಕ್‌ ಸಿಂಗ್‌ (58) ಅವರೂ ಕೈಚಳಕ ತೋರಿದರು.

ADVERTISEMENT

ಬಿಪಿಸಿಎಲ್‌ ತಂಡದ ದಿಪ್ಸನ್‌ ಟರ್ಕಿ (30), ಶಿಲಾನಂದ ಲಾಕ್ರಾ (49) ಮತ್ತು ದೇವೇಂದರ್‌ ವಾಲ್ಮಿಕಿ (56) ಅವರು ಗೋಲು ದಾಖಲಿಸಿದರು.

ಮೂರು ಮತ್ತು ನಾಲ್ಕನೇ ಸ್ಥಾನ ನಿರ್ಧರಿಸಲು ನಡೆದ ಹಣಾಹಣಿಯಲ್ಲಿ ಆಯಿಲ್‌ ಆ್ಯಂಡ್‌ ನ್ಯಾಚುರಲ್‌ ಗ್ಯಾಸ್‌ ಕಾರ್ಪೊರೇಷನ್‌ (ಒಎನ್‌ಜಿಸಿ) ತಂಡ 5–1 ಗೋಲುಗಳಿಂದ ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾ ಲಿಮಿಟೆಡ್‌ (ಜಿಎಐಎಲ್‌) ಎದುರು ಗೆದ್ದಿತು.

ವಿಜಯೀ ತಂಡದ ಜಗವಂತ್‌ ಸಿಂಗ್‌ (17, 22 ಮತ್ತು 60ನೇ ನಿಮಿಷ) ಹ್ಯಾಟ್ರಿಕ್‌ ಸಾಧನೆ ಮಾಡಿದರು. ಟೈರನ್‌ ಪೆರೇhರಾ (15) ಮತ್ತು ಯೋಗೇಂದರ್‌ ಸಿಂಗ್‌ (40) ಅವರೂ ಗೋಲು ದಾಖಲಿಸಿದರು.

ಐಒಸಿಎಲ್‌ ತಂಡದ ತಲ್ವಿಂದರ್‌ ಸಿಂಗ್‌ ಅವರು ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.