ADVERTISEMENT

ಆಸ್ಟ್ರೇಲಿಯಕ್ಕೆ ಸುಲಭ ಗೆಲುವು

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 20:00 IST
Last Updated 10 ಜೂನ್ 2019, 20:00 IST
   

ಮ್ಯಾಡ್ರಿಡ್‌: ಭಾರತ ಜೂನಿಯರ್‌ ಹಾಕಿ ತಂಡ, ಎಂಟು ರಾಷ್ಟ್ರಗಳ (21 ವರ್ಷದೊಳಗಿನವರ) ಆಹ್ವಾನ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ 0–4 ಗೋಲುಗಳಿಂದ ಆಸ್ಟ್ರೇಲಿಯಕ್ಕೆ ಶರಣಾಯಿತು.

ಸೋಮವಾರ ನಡೆದ ‘ಬಿ’ ಗುಂಪಿನ ಈ ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಉತ್ತಮ ಹೋರಾಟ ಕಂಡುಬಂತು. ಎರಡೂ ತಂಡಗಳಿಗೆ ಕೆಲವು ಅವಕಾಶಗಳು ಒದಗಿ ಬಂದರೂ ಅವುಗಳು ಗೋಲಾಗಲಿಲ್ಲ. ಎರಡನೇ ಕ್ವಾರ್ಟರ್‌ನಲ್ಲಿ ‘ಪೆನಾಲ್ಟಿ ಸ್ಟ್ರೋಕ್‌’ ಅವಕಾಶವನ್ನು ನಥಾನ್‌ ಎಫ್ರಮಸ್‌ ಗೋಲಾಗಿ ಪರಿವರ್ತಿಸಿದರು.

ಇದರಿಂದಾಗಿ ವಿರಾಮದ ವೇಳೆಗೆ ಆಸ್ಟ್ರೇಲಿಯಾ 1–0 ಮುನ್ನಡೆ ಪಡೆದಿತ್ತು.

ADVERTISEMENT

ಮೂರನೇ ಕ್ವಾರ್ಟರ್‌ನಲ್ಲಿ ಭಾರತದ ಪ್ರತಿರೋಧವನ್ನು ಯಶಸ್ವಿಯಾಗಿ ತಡೆದ ಆಸ್ಟ್ರೇಲಿಯಾ ಪಂದ್ಯದ 44ನೇ ನಿಮಿಷ ಮುನ್ನಡೆ ಹೆಚ್ಚಿಸಿಕೊಂಡಿತು.

ಎಫ್ರಮಸ್‌ ಎರಡನೇ ‘ಪೆನಾಲ್ಟಿ ಸ್ಟ್ರೋಕ್‌’ ಮೂಲಕ ಗೋಲು ಹೊಡೆದರು. ಅಂತಿಮ ಕ್ವಾರ್ಟರ್‌ನಲ್ಲಿ ಲಿಯಾಮ್‌ ಹಾರ್ಟ್‌, ಎಹ್ರನ್‌ ಹೆಝೆಲ್‌ ಆಸ್ಟ್ರೇಲಿಯಾದ ಮುನ್ನಡೆಯನ್ನು ಮತ್ತಷ್ಟು ಹಿಗ್ಗಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.