ಪ್ರಾತಿನಿಧಿಕ ಚಿತ್ರ
ಮಡಿಕೇರಿ: ಪಟ್ಟಡ ತಂಡವು ಇಲ್ಲಿ ನಡೆಯುತ್ತಿರುವ ‘ಮುದ್ದಂಡ ಕಪ್’ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಮುಕ್ಕಾಟಿರ (ಕುಂಬಳದಾಳು) ವಿರುದ್ಧ 5–0 ಗೋಲುಗಳ ಅಂತರದಿಂದ ಭರ್ಜರಿ ಗೆಲವು ದಾಖಲಿಸಿತು. ಕಾಂಡಂಡ ತಂಡವು 5–1 ಅಂತರದಿಂದ ನೆರಪಂಡ ವಿರುದ್ಧ ಜಯ ದಾಖಲಿಸಿತು.
ದಿನದ ಉಳಿದ ಪಂದ್ಯಗಳಲ್ಲಿ ಅಕ್ಕಪಂಡ 1–0ರಿಂದ ಮಂಗೇರಿರ ವಿರುದ್ಧ; ಮಾಣಿಪಂಡ 4–3ರಿಂದ ಮರುವಂಡ ವಿರುದ್ಧ; ಮಂಡೀರ 3–2ರಿಂದ ಮಂಡೆಯಂಡ ವಿರುದ್ಧ; ಬೊಜ್ಜಂಗಡ 4–2ರಿಂದ ಪಟ್ರಪಂಡ ವಿರುದ್ಧ; ಪಟ್ಟಚೆರುವಂಡ 4–0ರಿಂದ ಚೆಟ್ರುಮಾಡ ಎದುರು; ಬೊಳ್ತಂಡ 1–0ರಿಂದ ಮೋಟನಾಳಿರ ವಿರುದ್ಧ; ಕಂಬೇಯಂಡ 4–0 ಅಂತರದಿಂದ ಮಾಚ್ಚೆಟ್ಟಿರ ವಿರುದ್ಧ ಗೆಲುವು ಸಾಧಿಸಿದವು.
ಮೂಕಳೇರ 1–0ರಿಂದ ಕಾನತಂಡ ಎದುರು; ಚೆರಿಯಂಡ 3–0ರಿಂದ ಪೂಳಂಡ ವಿರುದ್ಧ; ಮಲ್ಚೀರ 4–0ರಿಂದ ಮಾದೇಟಿರ ವಿರುದ್ಧ; ಬಡುವಮಂಡ 5–1ರಿಂದ ಮೇದುರ ವಿರುದ್ಧ; ಪಳಂಗೇಟಿರ 2–0ರಿಂದ ಪೋತಂಡ ಎದುರು; ಬೈರಾಜಂಡ 3–1ರಿಂದ ಬಾಳೆಕುಟ್ಟಿರ ವಿರುದ್ಧ ಹಾಗೂ ಚೊಟ್ಟೆರ 5–3 ಅಂತರದಿಂದ ಪಳಂಗಿಯಂಡ ವಿರುದ್ಧ ಜಯ ಗಳಿಸಿದವು.
ಅಲ್ಲಾಂಡ, ಪಳೆಕಂಡ, ಕಲ್ಲೇಂಗಡ, ಪಾಳೆಡ, ಕೋಡಿರ, ತಂಡಗಳು ವಾಕ್‌ಓವರ್ ಪಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.