ADVERTISEMENT

ಹಾಕಿ: ಭಾರತ–ಜಪಾನ್‌ ಸೆಮಿಫೈನಲ್‌ ಇಂದು

ಪಿಟಿಐ
Published 13 ಜೂನ್ 2019, 20:00 IST
Last Updated 13 ಜೂನ್ 2019, 20:00 IST
ಭಾರತ ತಂಡದ ಮನದೀಪ್ ಸಿಂಗ್ ಅಭ್ಯಾಸದ ಸಂದರ್ಭದಲ್ಲಿ ‘ಫುಟ್‌ಬಾಲ್’ ಆಡಿದರು –ಪಿಟಿಐ ಚಿತ್ರ
ಭಾರತ ತಂಡದ ಮನದೀಪ್ ಸಿಂಗ್ ಅಭ್ಯಾಸದ ಸಂದರ್ಭದಲ್ಲಿ ‘ಫುಟ್‌ಬಾಲ್’ ಆಡಿದರು –ಪಿಟಿಐ ಚಿತ್ರ   

ಭುವನೇಶ್ವರ: ಆತಿಥೇಯ ರಾಷ್ಟ್ರವಾದ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ ಜಪಾನ್‌ ನೇರ ಪ್ರವೇಶ ಪಡೆದಿದೆ. ಆದರೆ, ‘ಒಲಿಂಪಿಕ್ಸ್‌ಗಿಂತ ಮೊದಲು ಪ್ರಬಲ ತಂಡಗಳೊಂದಿಗೆ ಆಡಿ ನಮ್ಮ ಸಾಮರ್ಥ್ಯ ಪರೀಕ್ಷೆ ನಡೆಸಲು ಬಯಸಿದ್ದೇವೆ’ ಎಂದು ತಂಡದ ಕೋಚ್‌ ಸಿಗ್‌ಫ್ರೀಡ್‌ ಐಕ್‌ಮನ್‌ ಹೇಳಿದರು.

ಜಪಾನ್‌, ಶುಕ್ರವಾರ ನಡೆಯುವ ಎಫ್‌ಐಎಚ್‌ ಸಿರೀಸ್‌ ಎರಡನೇ ಸೆಮಿಫೈನಲ್‌ನಲ್ಲಿ ವಿಶ್ವದ ಐದನೇ ಕ್ರಮಾಂಕದ ಭಾರತ ವಿರುದ್ಧ ಆಡಲಿದೆ. ಈ ಟೂರ್ನಿಯಿಂದ ಎರಡು ತಂಡಗಳು, ಅಕ್ಟೋಬರ್‌– ನವೆಂಬರ್‌ನಲ್ಲಿ ನಡೆ ಯಲಿರುವ ಎಫ್ಐಎಚ್‌ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆಯಲಿವೆ.

‘ಏಷ್ಯನ್ ಗೇಮ್ಸ್‌ ಚಿನ್ನದ ಪದಕ ವಿಜೇತ ಜಪಾನ್‌ ವಿರುದ್ಧ ಇತ್ತೀಚಿನ ವರ್ಷಗಳಲ್ಲಿ ಗೆಲುವಿನ ಉತ್ತಮ ದಾಖಲೆ ಹೊಂದಿದ್ದರೂ,
ಭಾರತ ತಂಡವು ಎದುರಾಳಿಯನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ’ ಎಂದು ಚೀಫ್‌ ಕೋಚ್‌ ಗ್ರಹಾಂ ರೀಡ್‌ ಗುರುವಾರ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.