ಐನ್ಡ್‌ಹೋವನ್ (ನೆದರ್ಲೆಂಡ್ಸ್): ಯುರೋಪ್ ಪ್ರವಾಸ ಕೈಗೊಂಡಿರುವ ಭಾರತ ಎ ಹಾಕಿ ತಂಡವು, ಮಂಗಳವಾರ ಐರ್ಲೆಂಡ್ ಎದುರು ಮೊದಲ ಪಂದ್ಯ ಆಡಲಿದೆ.
ತಂಡವು ಯುವ ಮತ್ತು ಅನುಭವಿ ಆಟಗಾರರಿಂದ ಕೂಡಿದ್ದು, ಡಿಫೆಂಡರ್ ಸಂಜಯ್ ಅವರು ನಾಯಕತ್ವ ವಹಿಸಿದ್ದಾರೆ. ಭಾರತೀಯ ಕಾಲಮಾನ 9.30ಕ್ಕೆ ಪಂದ್ಯ ಆರಂಭವಾಗಲಿದೆ.
‘ಯುರೋಪ್ ಪ್ರವಾಸವು ನಮಗೆಲ್ಲರಿಗೂ ಉತ್ತಮ ಅವಕಾಶವಾಗಿದೆ. ಬಲಿಷ್ಠ ತಂಡಗಳ ಎದುರು ಪಂದ್ಯಗಳಿದ್ದು, ನಮ್ಮ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡಲು ಎದುರು ನೋಡುತ್ತಿದ್ದೇವೆ’ ಎಂದು ಸಂಜಯ್ ಹೇಳಿದ್ದಾರೆ.
ಪ್ರವಾಸದಲ್ಲಿ ಭಾರತವು ಫ್ರಾನ್ಸ್, ಐರ್ಲೆಂಡ್ ಮತ್ತು ನೆದರ್ಲೆಂಡ್ಸ್ ವಿರುದ್ಧ ತಲಾ ಎರಡು ಹಾಗೂ ಇಂಗ್ಲೆಂಡ್, ಬೆಲ್ಜಿಯಂ ವಿರುದ್ಧ ತಲಾ ಒಂದು ಪಂದ್ಯಗಳನ್ನು ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.