
ಪ್ರಜಾವಾಣಿ ವಾರ್ತೆ
ಸಾಂಕೇತಿಕ ಚಿತ್ರ
ಸುರಬಯ (ಇಂಡೊನೇಷ್ಯಾ): ಆದಿತ್ಯ ರಾಣಾ ಮತ್ತು ನಾಯಕ ಕಬಿಲನ್ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಭಾರತ ತಂಡ, 20 ವರ್ಷದೊಳಗಿನವರ ಏಷ್ಯನ್ ವಾಲಿಬಾಲ್ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಸೋಮವಾರ 3–1 ಸೆಟ್‌ಗಳಿಂದ ಚೀನಾ ತಂಡವನ್ನು ಸೋಲಿಸಿತು.
ಭಾರತ 25–22, 19–25, 25–20, 25–22 ರಲ್ಲಿ ಜಯಗಳಿಸಿತು. ಚಾಂಪಿಯನ್‌ಷಿಪ್‌ನಲ್ಲಿ ಐದು ಮತ್ತು ಆರನೇ ಸ್ಥಾನಕ್ಕಾಗಿ ಮಂಗಳವಾರ ನಡೆಯುವ ಪಂದ್ಯದಲ್ಲಿ ಭಾರತ ತಂಡವು, ಕಜಕಸ್ತಾನ ಎದುರು ಆಡಲಿದೆ. ಈ ಪಂದ್ಯ ಗೆದ್ದಲ್ಲಿ ಭಾರತ 21 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ನಲ್ಲಿ ಆಡುವ ಅರ್ಹತೆ ಗಳಿಸಲಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತೀವ್ರ ಹೊರಾಟದ ನಂತರ 3–1 ಸೆಟ್‌ಗಳಿಂದ (25–23, 26–28, 25–16, 33–31) ಸೌದಿ ಅರೇಬಿಯಾ ತಂಡವನ್ನು ಮಣಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.