ADVERTISEMENT

ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತ ಮಹಿಳಾ ಹಾಕಿ ತಂಡಕ್ಕೆ ಸವಿತಾ ಪೂನಿಯಾ ನಾಯಕತ್ವ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 13:54 IST
Last Updated 23 ಜೂನ್ 2022, 13:54 IST
ಸವಿತಾ ಪೂನಿಯಾ 
ಸವಿತಾ ಪೂನಿಯಾ    

ನವದೆಹಲಿ: ಗೋಲ್ ಕೀಪರ್ ಸವಿತಾ ಪೂನಿಯಾ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಹಾಕಿ ತಂಡದ ನಾಯಕತ್ವ ವಹಿಸಲಿದ್ದಾರೆ.

ಗಾಯದಿಂದ ಚೇತರಿಸಿಕೊಳ್ಳದ ರಾಣಿ ರಾಂಪಾಲ್ ತಂಡಕ್ಕೆ ಆಯ್ಕೆಯಾಗಿಲ್ಲ. ಆದ್ದರಿಂದ ನಾಯಕಿಯ ಪಟ್ಟವನ್ನು ಸವಿತಾ ಅಲಂಕರಿಸಲಿದ್ದಾರೆ.ಅನುಭವಿ ಆಟಗಾರ್ತಿಯರಾದ ದೀಪ್‌ ಗ್ರೇಸ್ ಎಕ್ಕಾ ಅವರನ್ನು ಉಪನಾಯಕಿಯನ್ನಾಗಿ ನೇಮಕ ಮಾಡಲಾಗಿದೆ.

ಇದೇ ತಂಡವು ಜುಲೈ 1 ರಿಂದ 17ರವರೆಗೆ ನಡೆಯಲಿರುವ ವಿಶ್ವಕಪ್ ಹಾಕಿ ಟೂರ್ನಿಯಲ್ಲಿಯೂ ಆಡಲಿದೆ. ನೆದರ್ಲೆಂಡ್ಸ್ ಮತ್ತು ಸ್ಪೇನ್ ತಂಡಗಳ ಜಂಟಿಯಾಗಿ ಆತಿಥ್ಯ ವಹಿಸಲಿವೆ.

ADVERTISEMENT

‘ಅನುಭವಿ ಆಟಗಾರ್ತಿಯರಿಗೆ ತಂಡದಲ್ಲಿ ಆದ್ಯತೆ ನೀಡಿದ್ದೇವೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸ ತಂಡಕ್ಕಿದೆ’ ಎಂದು ಮುಖ್ಯ ಕೋಚ್ ಜೆನೆಕ್ ಶಾಪ್‌ಮನ್ ಹೇಳಿದ್ದಾರೆ.

ತಂಡ ಹೀಗಿದೆ
ಗೋಲ್‌ಕೀಪರ್‌
: ಸವಿತಾ (ನಾಯಕಿ), ರಜನಿ ಇತಿಮರ್ಪು
ಡಿಫೆಂಡರ್ಸ್: ದೀಪ್‌ ಗ್ರೇಸ್ ಎಕ್ಕಾ (ಉಪನಾಯಕಿ), ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ
ಮಿಡ್‌ಫೀಲ್ಡರ್ಸ್: ನಿಶಾ, ಸುಶೀಲಾ ಚಾನು ಪುಖರಂಬಮ್, ಮೋನಿಕಾ, ನೇಹಾ, ಜ್ಯೋತಿ, ನವಜ್ಯೋತ್ ಕೌರ್, ಸಲೀಮಾ ಟೆಟೆ.
ಫಾರ್ವರ್ಡ್ಸ್: ವಂದನಾ ಕಟಾರಿಯಾ, ಲಾಲ್‌ರೆಮ್ಸಿಯಾಮಿ, ನವನೀತ್ ಕೌರ್, ಶರ್ಮಿಳಾ ದೇವಿ, ಸಂಗೀತಾ ಕುಮಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.