ADVERTISEMENT

ಹಾಕಿ ಟೆಸ್ಟ್: ಆಸ್ಟ್ರೇಲಿಯಾಕ್ಕೆ ಆಘಾತ ನೀಡಿದ ಭಾರತ

13 ಪಂದ್ಯಗಳಲ್ಲಿ ಮೊದಲ ಜಯ

ಪಿಟಿಐ
Published 30 ನವೆಂಬರ್ 2022, 13:32 IST
Last Updated 30 ನವೆಂಬರ್ 2022, 13:32 IST
ಹಾಕಿ
ಹಾಕಿ   

ಅಡಿಲೇಡ್‌: ರೋಚಕ ಹೋರಾಟದಲ್ಲಿ ಭಾರತ ಹಾಕಿ ತಂಡವು ಆಸ್ಟ್ರೇಲಿಯಾಕ್ಕೆ ಆಘಾತ ನೀಡಿತು. ಬುಧವಾರ ಇಲ್ಲಿ ನಡೆದ ಮೂರನೇ ಹಾಕಿ ಟೆಸ್ಟ್‌ನಲ್ಲಿ 4–3ರಿಂದ ಹರ್ಮನ್‌ಪ್ರೀತ್ ಸಿಂಗ್‌ ಬಳಗ ಗೆದ್ದಿತು. ಇದರೊಂದಿಗೆ 13 ಪಂದ್ಯಗಳ ಬಳಿಕ ಮೊದಲ ಜಯ ಸಂಪಾದಿಸಿತು.

ಈ ವರ್ಷದ ಆರಂಭದಲ್ಲಿ ನಡೆದ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 0–7ರಿಂದ ಆಸ್ಟ್ರೇಲಿಯಾಕ್ಕೆ ಮಣಿದಿದ್ದ ಭಾರತಕ್ಕೆ ಇದು ಅಪರೂಪದ ಗೆಲುವಾಗಿದೆ.

ಈ ಜಯದೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ 1–2ರಿಂದ ಹಿನ್ನಡೆಯಲ್ಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಕ್ರಮವಾಗಿ 5–4 ಮತ್ತು 7–4ರಿಂದ ಗೆದ್ದಿತ್ತು.

ADVERTISEMENT

ಈ ಪಂದ್ಯದಲ್ಲಿ ಭಾರತ ಪರ ಹರ್ಮನ್‌ಪ್ರೀತ್ ಸಿಂಗ್‌ (12ನೇ ನಿಮಿಷ), ಅಭಿಷೇಕ್‌ (47ನೇ ನಿ.), ಶಂಷೇರ್‌ ಸಿಂಗ್‌ (57ನೇ ನಿ.) ಮತ್ತು ಆಕಾಶದೀಪ್ ಸಿಂಗ್ (60ನೇ ನಿ.) ಗೋಲು ದಾಖಲಿಸಿದರು.

ಆಸ್ಟ್ರೇಲಿಯಾ ತಂಡಕ್ಕಾಗಿ ಜಾಕ್ ವೆಲ್ಶ್‌ (25ನೇ ನಿ.), ನಾಯಕ ಆ್ಯರನ್‌ ಜಲೆವ್‌ಸ್ಕಿ (32ನೇ ನಿ.) ಮತ್ತು ನೇಥನ್‌ ಎಪರ್ಮಸ್‌ (59ನೇ ನಿ.) ಗೋಲು ಹೊಡೆದರು.

ನಿಗದಿತ ಸಮಯ ಮುಕ್ತಾಯಕ್ಕೆ 54 ಸೆಕೆಂಡುಗಳಿರುವಾಗ ಆಕಾಶದೀಪ್ ಗಳಿಸಿದ ಗೋಲು ಗೆಲುವಿಗೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.