ಯೋಗಾಸನ
(ಪಿಟಿಐ ಸಂಗ್ರಹ ಚಿತ್ರ)
ನವದೆಹಲಿ: ವಿಶ್ವದ 16 ತಂಡಗಳು ಇಲ್ಲಿನ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಇದೇ ತಿಂಗಳ 29ರಿಂದ 31ರವರೆಗೆ ನಡೆಯಲಿರುವ ಎರಡನೇ ಏಷ್ಯನ್ ಯೋಗಾಸನ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿವೆ.
ಕ್ರೀಡಾ ಸಚಿವಾಲಯ ಮತ್ತು ಯೋಗಾಸನ ಭಾರತ್ ಜಂಟಿ ಸಹಯೋಗದಲ್ಲಿ ಈ ಚಾಂಪಿಯನ್‌ಷಿಪ್ ನಡೆಯಲಿದೆ. ಶ್ರೀಮಂತ ಪರಂಪರೆ ಮತ್ತು ಆಳವಾದ ಸಾಂಸ್ಕೃತಿಕ ಬೇರು ಹೊಂದಿರುವ ಯೋಗಾಸನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸುವ ಉದ್ದೇಶವನ್ನು ಇಲ್ಲಿ ಹೊಂದಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.