ADVERTISEMENT

ಆನ್‌ಲೈನ್ ಶೂಟಿಂಗ್‌: ಮಿಂಚಿದ ಸೌರಭ್‌ ಚೌಧರಿ, ದಿವ್ಯಾಂಶ್ ಪನ್ವರ್‌

ಏಷ್ಯನ್ ಆನ್‌ಲೈನ್ ಶೂಟಿಂಗ್ ಚಾಂಪಿಯನ್‌ಷಿಪ್

ಪಿಟಿಐ
Published 30 ಜನವರಿ 2021, 17:33 IST
Last Updated 30 ಜನವರಿ 2021, 17:33 IST
ಸೌರಭ್ ಚೌಧರಿ–ಪಿಟಿಐ ಚಿತ್ರ
ಸೌರಭ್ ಚೌಧರಿ–ಪಿಟಿಐ ಚಿತ್ರ   

ನವದೆಹಲಿ: ಮೊದಲ ಬಾರಿ ನಡೆದ ಏಷ್ಯನ್ ಆನ್‌ಲೈನ್ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ 24 ಸ್ಪರ್ಧಿಗಳ ತಂಡವು ಪಾರಮ್ಯ ಮೆರೆಯಿತು. ನಾಲ್ಕು ಚಿನ್ನದ ಪದಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತು.

ಭಾರತದ ಶೂಟರ್‌ಗಳು ಎರಡು ಬೆಳ್ಳಿ ಹಾಗೂ ಐದು ಕಂಚು ಸೇರಿ ಒಟ್ಟು 11 ಪದಕಗಳನ್ನು ಗಳಿಸಿದರು.

ಕುವೈತ್ ಶೂಟಿಂಗ್ ಫೆಡರೇಷನ್‌ನ್‌ ಎರಡು ದಿನ (ಗುರುವಾರ ಮತ್ತು ಶುಕ್ರ ವಾರ) ನಡೆದ ಟೂರ್ನಿಯಲ್ಲಿ ಏಷ್ಯಾದ 274 ಸ್ಪರ್ಧಿ ಗಳು ಪಾಲ್ಗೊಂಡಿ ದ್ದರು.

ADVERTISEMENT

ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಸೌರಭ್ ಚೌಧರಿ, 10 ಮೀ. ಏರ್ ರೈಫಲ್ಸ್‌ನಲ್ಲಿ ದಿವ್ಯಾಂಶ್ ಸಿಂಗ್ ಪನ್ವರ್‌, ಟ್ರ್ಯಾಪ್‌ ವಿಭಾಗದಲ್ಲಿ ಕಿನನ್‌ ಚೆನಾಯ್‌ ಹಾಗೂ ಮಹಿಳಾ ಟ್ರ್ಯಾಪ್ ವಿಭಾಗದಲ್ಲಿ ರಾಜೇಶ್ವರಿ ಕುಮಾರಿ ಚಿನ್ನದ ಪದಕ ಗೆದ್ದರು.

ಪುರುಷರ 10 ಮೀ. ಏರ್ ರೈಫಲ್‌ ನಲ್ಲಿ ಅರ್ಜುನ್‌ ಬಬುತಾ, ಮಹಿಳಾ ಟ್ರ್ಯಾಪ್ ವಿಭಾಗದಲ್ಲಿ ಶ್ರೇಯಸಿ ಸಿಂಗ್‌ ಬೆಳ್ಳಿ ಪದಕಗಳಿಗೆ ಕೊರಳೊಡ್ಡಿದರು. ಮನು ಭಾಕರ್‌ (ಮಹಿಳೆಯರ 10 ಮೀ. ಏರ್ ಪಿಸ್ತೂಲ್‌), ಸರಬ್‌ಜೋತ್‌ ಸಿಂಗ್‌ (ಪುರುಷರ 10 ಮೀ. ಏರ್ ಪಿಸ್ತೂಲ್‌), ದೀಪಕ್ ಕುಮಾರ್‌ (ಪುರುಷರ 10 ಮೀ. ಏರ್ ರೈಫಲ್‌), ಪೃಥ್ವಿರಾಜ್‌ ತೊಂಡೈಮಾನ್‌ (ಪುರುಷರ ಟ್ರ್ಯಾಪ್‌) ಹಾಗೂ ಮನೀಷ್‌ ಕೀರ್‌ (ಮಹಿಳೆಯರ ಟ್ರ್ಯಾಪ್‌) ವಿಭಾಗದಲ್ಲಿ ಕಂಚಿಕ ಪದಕಗಳನ್ನು ತಮ್ಮದಾಗಿಸಿಕೊಂಡರು.

ಒಟ್ಟು ಎಂಟು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.