
ಪ್ರಜಾವಾಣಿ ವಾರ್ತೆ
ಎಕ್ಸ್ ಚಿತ್ರ
ರೂರ್ಕೆಲಾ: ಆತಿಥೇಯ ಭಾರತ ತಂಡವು ಪ್ರೊ ಲೀಗ್ ಹಾಕಿ ಪಂದ್ಯದಲ್ಲಿ ಶುಕ್ರವಾರ ಅರ್ಜೆಂಟೀನಾ ತಂಡದ ಕೈಲಿ 0–8 ಗೋಲುಗಳ ದಾಖಲೆ ಅಂತರದ ಸೋಲು ಅನುಭವಿಸಿತು. ಈ ಬಾರಿಯ ಋತುವಿನಲ್ಲಿ ಭಾರತ ತಂಡಕ್ಕೆ ಎರಡು ದಿನಗಳಲ್ಲಿ ಇದು ಎರಡನೇ ಸೋಲು ಎನಿಸಿತು.
ಬಿರ್ಸಾ ಮುಂಡಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಋತುವಿನ ತನ್ನ ಮೊದಲ ಪಂದ್ಯದಲ್ಲಿ ಭಾರತ ಬುಧವಾರ ಪ್ರಬಲ ಬೆಲ್ಜಿಯಂ ಕೈಲಿ 2–1 ಗೋಲುಗಳ ಸೋಲು ಕಂಡಿತ್ತು. ಆದರೆ ಅರ್ಜೆಂಟೀನಾ ತಂಡ ಆಕ್ರಮಣಕಾರಿ ಆಟವಾಡಿ ದಾಖಲೆ ಅಂತರದ ಜಯ ಸಾಧಿಸಿತು. ಈ ಭಾರಿ ಹಿನ್ನಡೆ ತಂಡದ ಮೇಲೆ ಅತೀವ ಒತ್ತಡ ಹೇರಿದೆ.
ಬೆಲ್ಜಿಯಂ ವಿರುದ್ಧ ರಕ್ಷಣೆ ವಿಭಾಗದಲ್ಲಿ ಕಂಡ ಹುಳುಕುಗಳು ಈ ಪಂದ್ಯದಲ್ಲಿ ಇನ್ನಷ್ಟು ಗಾಢವಾಗಿ ಕಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.