ADVERTISEMENT

Asian Games | ಸೆಪೆಕ್ ಟಕ್ರಾ: ಭಾರತದ ವನಿತೆಯರಿಗೆ ಐತಿಹಾಸಿಕ ಕಂಚು

ಪಿಟಿಐ
Published 6 ಅಕ್ಟೋಬರ್ 2023, 10:38 IST
Last Updated 6 ಅಕ್ಟೋಬರ್ 2023, 10:38 IST
<div class="paragraphs"><p>ಚಿತ್ರ ಕೃಪೆ: X/<a href="https://twitter.com/Media_SAI">@Media_SAI</a></p></div>

ಚಿತ್ರ ಕೃಪೆ: X/@Media_SAI

   

ಜಿನಾಹು: ಭಾರತದ ಮಹಿಳೆಯರ ತಂಡವು ಏಷ್ಯನ್ ಕ್ರೀಡಾಕೂಟದ ಸೆಪೆಕ್‌ ಟಕ್ರಾ ಕ್ರೀಡೆಯ ರೆಗು ವಿಭಾಗದಲ್ಲಿ ಕಂಚಿನ ಪದಕ ಜಯಿಸಿತು.

ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿಯೇ ಭಾರತ ಮಹಿಳೆಯರ ತಂಡವು ಈ ಕ್ರೀಡೆಯಲ್ಲಿ ಗೆದ್ದ ಮೊಟ್ಟಮೊದಲ ಪದಕ ಇದು. ದೇಶಕ್ಕೆ ಲಭಿಸಿದ ಒಟ್ಟಾರೆ ಎರಡನೇ ಪದಕ ಇದಾಗಿದೆ.

ADVERTISEMENT

2018ರ ಜಕಾರ್ತಾ ಏಷ್ಯನ್ ಕೂಟದಲ್ಲಿ ಭಾರತ ಪುರುಷರ ತಂಡವೂ ಕಂಚು ಪದಕ ಗೆದ್ದಿತ್ತು.

ಅಯೆಕಪಾಲ್ ಮೈಪಾಕ್ ದೇವಿ, ಒಯಿನಾಮ್‌ ಚವೊಬಾ ದೇವಿ, ಖುಷ್ಬೂ, ಇಲಾಂಗ್‌ಬಮ್ ಪ್ರಿಯಾದೇವಿ ಮತ್ತು ಎಲಾಂಗಬಮ್ ಲೀರೆಂಟೊಂಬಿ ದೇವಿ ಅವರಿದ್ದ ತಂಡವು ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್ ವಿರುದ್ಧ ಸೋತಿತು.

ಸೆಪೆಕ್ ಟಕ್ರಾ ಕ್ರೀಡೆಯಲ್ಲಿ ಬಲಾಢ್ಯವಾಗಿರುವ  ಥಾಯ್ಲೆಂಡ್ ದೇಶದ ತಂಡವು 10–21, 13–21ರಿಂದ ಭಾರತ ತಂಡವನ್ನು ಮಣಿಸಿತು. ಥಾಯ್ ತಂಡವು ಹೋದ ಸಲ ಚಿನ್ನದ ಪದಕ ಜಯಿಸಿತ್ತು.

ಗುಂಪು ಹಂತದಲ್ಲಿ ಭಾರತ ತಂಡವು ಎರಡನೇ ಸ್ಥಾನ ಪಡೆದಿತ್ತು. ವಿಯೆಟ್ನಾಂ ತಂಡ ಮೊದಲ ಸ್ಥಾನ ಪಡೆದಿತ್ತು.

ಸೆಮಿಫೈನಲ್‌ ಮುಗಿದ ನಂತರ ಉಭಯ ತಂಡಗಳೂ ಜೊತೆಯಾಗಿ ಚಿತ್ರ ತೆಗೆಸಿಕೊಂಡವು.

ಆಗ ಆಕ್ಷೇಪಿಸಿದ ರೆಫರಿ ಜೊತೆಗೆ ವಾದ ನಡೆಸಿದ  ಭಾರತ ತಂಡದ ಮುಖ್ಯ ಕೋಚ್ ಹೇಮ್‌ ರಾಜ್,  ‘ಥಾಯ್ಲೆಂಡ್ ಎದುರು ಆಡುವುದೇ ಒಂದು ದೊಡ್ಡ ಅನುಭವ. ವಿಶ್ವದಲ್ಲಿಯೇ ಶ್ರೇಷ್ಠ ಆಟಗಾರರು ಇರುವ ತಂಡ ಇದು. ಅವರೊಂದಿಗೆ ಸೆಣೆಸಿದ್ದೇ  ಆತ್ಮವಿಶ್ವಾಸ ಇಮ್ಮಡಿಸಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.