ADVERTISEMENT

ಗೋಲ್ಡನ್‌ ಗ್ಲೋವ್‌ ಯೂತ್ ಬಾಕ್ಸಿಂಗ್: ಭಾರತಕ್ಕೆ 19 ಪದಕ

ಪಿಟಿಐ
Published 20 ಸೆಪ್ಟೆಂಬರ್ 2022, 4:23 IST
Last Updated 20 ಸೆಪ್ಟೆಂಬರ್ 2022, 4:23 IST
ಪದಕಗಳೊಂದಿಗೆ ಭಾರತ ಯುವ ಬಾಕ್ಸಿಂಗ್‌ ತಂಡ
ಪದಕಗಳೊಂದಿಗೆ ಭಾರತ ಯುವ ಬಾಕ್ಸಿಂಗ್‌ ತಂಡ   

ನವದೆಹಲಿ: ಭಾರತದ ಯುವ ಬಾಕ್ಸರ್‌ಗಳು ಸರ್ಬಿಯಾದ ವೊವೊದಿನಾದಲ್ಲಿ ನಡೆದ ಗೋಲ್ಡನ್‌ ಗ್ಲೋವ್‌ ಯೂತ್ ಬಾಕ್ಸಿಂಗ್ ಟೂರ್ನಿಯಲ್ಲಿ ಭರ್ಜರಿ 19 ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಟೂರ್ನಿಯ ಕೊನೆಯ ದಿನವಾದ ಸೋಮವಾರ 10 ಚಿನ್ನದ ಪದಕಗಳು ಭಾರತದ ಮಡಿಲು ಸೇರಿದವು.ಮಹಿಳಾ ವಿಭಾಗದಲ್ಲಿ ಭಾವನಾ ಶರ್ಮಾ (48 ಕೆಜಿ ವಿಭಾಗ), ದೇವಿಕಾ ಘೋರ್ಪಡೆ (52 ಕೆಜಿ), ಕುಂಜರಾಣಿ ದೇವಿ (60 ಕೆಜಿ), ರವೀನಾ (63 ಕೆಜಿ) ಮತ್ತು ಕೀರ್ತಿ (+81 ಕೆಜಿ) ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ಸ್ಪರ್ಧೆಯಲ್ಲಿದ್ದ ಭಾರತದ 12 ಮಹಿಳೆಯರೂ ‘ಪೋಡಿಯಂ ಫಿನಿಶ್‘ ಮಾಡಿದರು.

ಫೈನಲ್‌ ತಲುಪಿದ್ದ ಭಾರತದ ಎಲ್ಲ ಐದೂ ಮಂದಿ ಪುರುಷ ಸ್ಪರ್ಧಿಗಳು ಚಿನ್ನದ ಪದಕಗಳಿಗೆ ಮುತ್ತಿಟ್ಟರು. ವಿಶ್ವ ನಾಥ್‌ (48 ಕೆಜಿ), ಆಶಿಷ್‌ (54 ಕೆಜಿ), ಸಾಹಿಲ್‌ (71 ಕೆಜಿ), ಜಾದೂಮಣಿ (51 ಕೆಜಿ), ಭರತ್ ಜೂನ್‌ (92 ಕೆಜಿ) ಅಗ್ರಸ್ಥಾನ ಗಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.