ADVERTISEMENT

ಚೆಸ್: ಎಂಟರ ಘಟ್ಟಕ್ಕೆ ಪ್ರಜ್ಞಾನಂದ

ಪಿಟಿಐ
Published 23 ಮೇ 2022, 17:34 IST
Last Updated 23 ಮೇ 2022, 17:34 IST
ಪ್ರಜ್ಞಾನಂದ
ಪ್ರಜ್ಞಾನಂದ   

ಚೆನ್ನೈ: ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಮೆಲ್ಟ್‌ವಾಟರ್ ಚಾಂಪಿಯನ್ಸ್‌ ಚೆಸ್ ಚೆಸೆಬಲ್ ಮಾಸ್ಟರ್ಸ್‌ ಟೂರ್ನಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

ಭಾನುವಾರ ತಡರಾತ್ರಿ ನಡೆದ 15ನೇ ಸುತ್ತಿನಲ್ಲಿ 16 ವರ್ಷದ ಪ್ರಜ್ಞಾನಂದ ಭಾರತದವರೇ ಆದ ಗ್ರ್ಯಾಂಡ್‌ಮಾಸ್ಟರ್‌ ವಿದಿತ್ ಗುಜರಾತಿ ಎದುರು ಜಯಿಸಿದರು.

ಈ ಟೂರ್ನಿಯ ಆರನೇ ಸುತ್ತಿನಲ್ಲಿ ಪ್ರಜ್ಞಾನಂದ ವಿಶ್ವ ಚಾಂಪಿಯನ್, ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ವಿರುದ್ಧ ಜಯಿಸಿದ್ದರು. ಒಟ್ಟು 25 ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದರು. ಅನೀಶ್ ಗಿರಿ (29 ಅಂಕ), ಕಾರ್ಲಸನ್ (28 ಅಂಕ) ಮತ್ತು ಡಿಂಗ್ ಲಿರೆನ್ (25 ಅಂಕ) ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.