ಆ್ಯಂಟ್‌ವರ್ಪ್: ಭಾರತ ಜೂನಿಯರ್ ಮಹಿಳಾ ತಂಡ ಯುರೋಪ್ ಪ್ರವಾಸದಲ್ಲಿ ಬೆಲ್ಜಿಯಂ ತಂಡವನ್ನು 3–2 ಗೋಲುಗಳಿಂದ ಸೋಲಿಸಿತು. ಇದು ಭಾರತ ತಂಡಕ್ಕೆ ಸತತ ಮೂರನೇ ಜಯ.
ಗುರುವಾರ ನಡೆದ ಪಂದ್ಯದಲ್ಲಿ ಸೋನಮ್ ಅವರು ನಾಲ್ಕನೇ ನಿಮಿಷ ಭಾರತ ತಂಡಕ್ಕೆ ಮುನ್ನಡೆ ಒದಗಿಸಿದರು. ಲಾಲ್ತನ್‌ಲುವಾಂಗಿ 32ನೇ ನಿಮಿಷ ಮತ್ತು 51ನೇ ನಿಮಿಷ ಕನಿಕಾ ಸಿವಾಚ್ ಅವರು ಮತ್ತೆ ಎರಡು ಗೋಲುಗಳನ್ನು ಗಳಿಸಿದರು. ಬೆಲ್ಜಿಯಂ ತಂಡಕ್ಕೆ ಮೇರಿ ಗೋಯೆನ್ಸ್ (37ನೇ ನಿಮಿಷ) ಮತ್ತು ಮಾರ್ತೆ ಮೇರಿ (40ನೇ ನಿಮಿಷ) ಗೋಲು ತಂದಿತ್ತರು.
ಭಾರತ ತಂಡವು ಮುಂದಿನ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಶನಿವಾರ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.