ಬೆಂಗಳೂರು: ರೂಪಿಂದರ್ ಪಾಲ್ ಸಿಂಗ್ ಅವರು ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ‘ಎ’ ತಂಡವು ಅಭ್ಯಾಸ ಪಂದ್ಯದಲ್ಲಿ ಜಯಿಸಿದೆ.
ಶುಕ್ರವಾರ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 5–1ರಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿದೆ.
ಭಾರತ ತಂಡವು ಪಂದ್ಯದ ಆರಂಭದಿಂದಲೂ ಉತ್ತಮ ಆಟವಾಡಿತು. ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು 24ನೇ ನಿಮಿಷದಲ್ಲಿಭೇದಿಸಿದ ರೂಪಿಂದರ್ ಅವರು ಗೊಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಅವರು 47 ಹಾಗೂ 60ನೇ ನಿಮಿಷಗಳಲ್ಲೂ ಗೋಲು ದಾಖಲಿಸಿದರು.ಭಾರತದ ಪರವಾಗಿ ಗುರ್ಜೀಂದರ್ (27ನೇ ನಿ.) ಹಾಗೂ ವಿಕಾಸ್ ದಹಿಯಾ (54ನೇ ನಿ.) ಅವರು ತಲಾ ಒಂದು ಬಾರಿ ಚೆಂಡನ್ನು ಗುರಿ ಮುಟ್ಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.