ADVERTISEMENT

ಫುಟ್‌ಬಾಲ್: ಢಾಕಾ ತೆರಳಿದ ಭಾರತ ತಂಡ

ಪಿಟಿಐ
Published 15 ಏಪ್ರಿಲ್ 2024, 16:21 IST
Last Updated 15 ಏಪ್ರಿಲ್ 2024, 16:21 IST
<div class="paragraphs"><p>ಫುಟ್‌ಬಾಲ್</p></div>

ಫುಟ್‌ಬಾಲ್

   

ಫರಿದಾಬಾದ್: ವಿಶೇಷ ಒಲಿಂಪಿಕ್ಸ್ ದಕ್ಷಿಣ ಏಷ್ಯಾ ಏಕೀಕೃತ ಸೆವೆನ್-ಎ-ಸೈಡ್ ಫುಟ್‌ಬಾಲ್ ಟೂರ್ನಿಯಲ್ಲಿ ಭಾಗವಹಿಸಲು ಪುರುಷರು ಮತ್ತು ಮಹಿಳೆಯರನ್ನು ಒಳಗೊಂಡ 28 ಸದಸ್ಯರ ಭಾರತ ತಂಡ ಸೋಮವಾರ ಢಾಕಾಗೆ ತೆರಳಿದೆ.

22 ಆಟಗಾರರು ಮತ್ತು ಎಂಟು ವಿವಿಧ ರಾಜ್ಯಗಳನ್ನು ಪ್ರತಿನಿಧಿಸವ ಐವರು ತರಬೇತುದಾರರನ್ನು ಒಳಗೊಂಡ ತಂಡಕ್ಕೆ ಸೋಮವಾರ ಇಲ್ಲಿ ಬೀಳ್ಕೊಡುಗೆ ನೀಡಲಾಯಿತು.

ADVERTISEMENT

‘ಮಹಿಳಾ ತಂಡದಿಂದ ನಾವು ಖಂಡಿತವಾಗಿಯೂ ಒಂದು ಪದಕವನ್ನು ಗೆಲ್ಲುವ ಭರವಸೆ ಹೊಂದಿದ್ದೇವೆ. ಪುರುಷರ ತಂಡವು ತಮ್ಮ ಕೌಶಲಗಳನ್ನು ಸ್ವಲ್ಪ ಹೆಚ್ಚು ಸುಧಾರಿಸಬೇಕಾಗಿದೆ. ಪ್ರಮುಖವಾಗಿ ಗೋಲು ರಕ್ಷಿಸುವುದು. ನಾವು ಉತ್ತಮವಾದದ್ದನ್ನು ನಿರೀಕ್ಷಿಸುತ್ತಿದ್ದೇವೆ’ ಎಂದು ವಿಶೇಷ ಒಲಿಂಪಿಕ್ಸ್ ಭಾರತದ ಕ್ರೀಡಾ ನಿರ್ದೇಶಕ ಹರ್ಪ್ರೀತ್ ಸಿಂಗ್ ಸಮಾರಂಭದಲ್ಲಿ ಹೇಳಿದರು.

ವಿಶೇಷ ಒಲಿಂಪಿಕ್ಸ್ ಭಾರತ್ ಬೌದ್ಧಿಕ ವಿಕಲಚೇತನರಿಗಾಗಿ ರಾಷ್ಟ್ರೀಯ ಕ್ರೀಡಾ ಫೆಡರೇಶನ್ ಆಗಿದೆ. ಕ್ರೀಡಾ ಸಚಿವಾಲಯ ಮಾನ್ಯತೆ ನೀಡಿದೆ. 

‘ಫುಟ್‌ಬಾಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಇದರಿಂದ ನನ್ನಲ್ಲಿ ಸಾಕಷ್ಟು ಪರಿವರ್ತನೆ ಆಗಿದೆ. ದೇಶ ಮತ್ತು ನನ್ನ ಹೆತ್ತವರನ್ನು ಹೆಮ್ಮೆಪಡುವಂತೆ ಮಾಡಲು ಬಯಸುತ್ತೇನೆ. ಚಿನ್ನದ ಪದಕಕ್ಕಾಗಿ ಉತ್ತಮ ಪ್ರಯತ್ನ ಮಾಡುತ್ತೇವೆ’ ಎಂದು ಮಹಿಳಾ ಫುಟ್‌ಬಾಲ್ ತಂಡದ ನಾಯಕಿ ಅಂಕಿತಾ ಹೇಳಿದರು.

 ಇಂಡೊನೇಷ್ಯಾ, ಹಾಂಗ್ ಕಾಂಗ್ ಮತ್ತು ಮಾಲ್ಡೀವ್ಸ್ ಒಳಗೊಂಡ ಟೂರ್ನಿಯ ಸಿದ್ಧತೆಯ ಭಾಗವಾಗಿ ಆಟಗಾರರು ಇಲ್ಲಿ ತರಬೇತಿ ಶಿಬಿರದಲ್ಲಿ ಭಾಗಿಯಾಗಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.