ADVERTISEMENT

ಏಷ್ಯನ್ ಕ್ರೀಡಾಕೂಟ: ಜಿಮ್ನಾಸ್ಟಿಕ್ಸ್‌ನಲ್ಲಿ ಭಾರತಕ್ಕೆ 7ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2018, 15:17 IST
Last Updated 22 ಆಗಸ್ಟ್ 2018, 15:17 IST

ಜಕಾರ್ತ: ದೀಪಾ ಕರ್ಮಾಕರ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿದ ಭಾರತದ ಮಹಿಳಾ ಜಿಮ್ನಾಸ್ಟ್‌ಗಳು ಏಳನೇ ಸ್ಥಾನ ಗಳಿಸಿದರು.

ಎಂಟು ತಂಡಗಳಿದ್ದ ಫೈನಲ್‌ನಲ್ಲಿ ಭಾರತ ಬುಧವಾರ 138.50 ಪಾಯಿಂಟ್‌ ಗಳಿಸಿತು. ಆತಿಥೇಯ ಇಂಡೊನೇಷ್ಯಾ ಕೊನೆಯ ಸ್ಥಾನದಲ್ಲಿ ಉಳಿಯಿತು. ಮೊಣಕಾಲು ನೋವಿನಿಂದ ಬಳಲಿದ ದೀಪಾ ಕರ್ಮಾಕರ್‌ ಫೈನಲ್‌ನಲ್ಲಿ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದರು.

ಅರುಣ ಬುದ್ಧ ರೆಡ್ಡಿ ಮತ್ತು ಪ್ರಣತಿ ದಾಸ್‌ ಎಲ್ಲ ನಾಲ್ಕು ವಿಭಾಗಗಳಲ್ಲೂ ಸ್ಪರ್ಧಿಸಿದರು. ಪ್ರಣತಿ ನಾಯಕ್‌ ಮೂರು ವಿಭಾಗಗಳಲ್ಲಿ ಮಾತ್ರ ಸ್ಪರ್ಧಿಸಿದರು. ಮಂದಿರಾ ಚೌಧರಿ, ಬ್ಯಾಲನ್ಸ್ ಬೀಮ್‌ ವಿಭಾಗದಲ್ಲಷ್ಟೇ ಸೆಣಸಿದರು.

ADVERTISEMENT

ಮಹಿಳೆಯರ ವೈಯಕ್ತಿಕ ಫೈನಲ್ ಸ್ಪರ್ಧೆಗಳು ಗುರುವಾರ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.