ನವದೆಹಲಿ: ಭಾರತದ ಬಾಕ್ಸರ್‌ಗಳು, ಚೀನಾದ ಷಿನ್‌ಜಿಯಾಂಗ್‌ನಲ್ಲಿ ನಡೆಯುತ್ತಿರುವ ಮೂರನೇ ‘ಬೆಲ್ಟ್ ಅಂಡ್ ರೋಡ್ ಇಂಟರ್‌ನ್ಯಾಷನಲ್ ಯೂತ್ ಬಾಕ್ಸಿಂಗ್ (17, 19 ಮತ್ತು 23 ವರ್ಷದೊಳಗಿನವರ) ಟೂರ್ನಿಯಲ್ಲಿ 26 ಪದಕಗಳನ್ನು ಖಚಿತಪಡಿಸಿಕೊಂಡರು.
ಭಾರತ ಈ ಟೂರ್ನಿಗೆ 17 ವರ್ಷದೊಳಗಿನವರ ವಿಭಾಗದಲ್ಲಿ 58 ಮಂದಿಯ ತಂಡವನ್ನು ಕಳುಹಿಸಿತ್ತು. ಇವರಲ್ಲಿ 20 ಬಾಲಕರು ಮತ್ತು 20 ಬಾಲಕಿಯರು ಒಳಗೊಂಡಿದ್ದರು.
ಧ್ರುವ್ ಖಾರ್ಬ್ (46ಕೆ.ಜಿ), ಉದಯ್ ಸಿಂಗ್ (46 ಕೆ.ಜಿ), ಫಲಕ್ (48 ಕೆ.ಜಿ), ಪೀಯುಷ್ (50 ಕೆ.ಜಿ), ಆದಿತ್ಯ (52 ಕೆ.ಜಿ), ಉಧಾಮ್ ಸಿಂಗ್ ರಾಘವ್ (54 ಕೆ.ಜಿ), ಆಶಿಷ್ (54 ಕೆ.ಜಿ), ದೇವೇಂದ್ರ ಚೌಧರಿ (75 ಕೆ.ಜಿ), ಜೈದೀಪ್ ಸಿಂಗ್ ಹಂಜ್ರಾ (80 ಕೆ.ಜಿ) ಮತ್ತು ಲೋವೆನ್ ಗುಲಿಯಾ ಅವರು ಚೀನಾ ಮತ್ತು ಕೊರಿಯಾ, ಉಜ್ಬೇಕಿಸ್ತಾನ, ಕಿರ್ಗಿಸ್ತಾನದ ಎದುರಾಳಿಗಳನ್ನು ಸೋಲಿಸಿ ಸೆಮಿಫೈನಲ್ ತಲುಪಿದರು. ಆ ಮೂಲಕ ಪದಕಗಳನ್ನು ಖಚಿತಪಡಿಸಿಕೊಂಡಿದ್ದಾರೆ.
ಜೂನಿಯರ್ ಬಾಲಕಿಯರ ವಿಭಾಗದಲ್ಲೂ ಭಾರತದ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಖುಷಿ (46 ಕೆ.ಜಿ), ಭಕ್ತಿ (50 ಕೆ.ಜಿ), ರಾಧಾಮಣಿ (60 ಕೆ.ಜಿ), ಹರ್ಷಿಕಾ (60 ಕೆ.ಜಿ), ದಿಯಾ (66 ಕೆ.ಜಿ), ಪ್ರಿಯಾ (66 ಕೆ.ಜಿ), ಲಕ್ಷ್ಮೀ (46 ಕೆ.ಜಿ), ಚಾಹತ್ (60 ಕೆ.ಜಿ), ಹಿಮಾಂಶಿ (66 ಕೆ.ಜಿ), ಹರನೂರ್ (66 ಕೆಜಿ) ಮತ್ತು ಪ್ರಾಚಿ ಖತ್ರಿ (+80 ಕೆ.ಜಿ) ಅವರೂ ನಾಲ್ಕರ ಘಟ್ಟ ತಲುಪಿದ್ದು ಪದಕಗಳನ್ನು ಖಚಿತಪಡಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.