ವೇಟ್‌ಲಿಫ್ಟಿಂಗ್
ಪ್ರಾತಿನಿಧಿಕ ಚಿತ್ರ
ಜಿಯಾಂಗ್‌ಶಾನ್ (ಚೀನಾ): ಭಾರತದ ವೇಟ್ ಲಿಫ್ಟರ್ ನಿರುಪಮಾ ದೇವಿ ಏಷ್ಯನ್ ವೇಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಮಹಿಳೆಯರ 64ಕೆ.ಜಿ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದರು. ಅವರು ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ ಎರಡು ಸಲ ವಿಫಲರಾದರು.
24 ವರ್ಷದ ಏಷ್ಯನ್ ಯೂತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್ ಪದಕವಿಜೇತೆ, ನಾನ್ ಒಲಿಂಪಿಕ್ ವಿಭಾಗದಲ್ಲಿ ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ 115 ಕೆ.ಜಿ ಭಾರ ಎತ್ತುವಲ್ಲಿ ಮಾತ್ರ ಸಫಲರಾದರು. 125 ಕೆ.ಜಿ. ಭಾರ ಎತ್ತುವಲ್ಲಿ ವಿಫಲರಾದರು. ಸ್ನ್ಯಾಚ್ ವಿಭಾಗದಲ್ಲಿ 91ಕೆ.ಜಿ. ಭಾರ ಎತ್ತಿ ಒಟ್ಟು 206 ಕೆ.ಜಿ. ಭಾರ ಎತ್ತಿದರು.
ಒಂದು ವೇಳೆ 125 ಕೆ.ಜಿ. ಭಾರ ಎತ್ತಿದ್ದರೆ ನಿರುಪಮಾ ದೇವಿ ಅವರು ದಕ್ಷಿಣ ಕೊರಿಯಾದ ಮುನ್ ಮಿನ್–ಹೀ 214 ಕೆ.ಜಿ (94.ಕೆ.ಜಿ+ 120 ಕೆ.ಜಿ) ಅವರನ್ನು ಹಿಂದಿಕ್ಕಬಹುದಿತ್ತು. ಮಿನ್ ಹೀ ಕಂಚು ಪಡೆದರು.
ಚೀನಾದ ಲೀ ಶುಹಾಂಗ್ 239 ಕೆ.ಜಿ. (105+134ಕೆ.ಜಿ) ಚಿನ್ನ ಗೆದ್ದರು. ಫಿಲಿಪಿನಾದ ಲಿಫ್ಟರ್ ಎಲ್‌ರೀನ್ ಆನ್ ಆ್ಯಂಡೊ 232ಕೆ.ಜಿ (102+130ಕೆಜಿ) ಬೆಳ್ಳಿ ಗೆದ್ದರು.
ಭಾರತದ ದಿಲ್ಬರ್ ಸಿಂಗ್ ಅವರು ಮಂಗಳವಾರ ನಡೆಯಲಿರುವ ಪುರುಷರ 96 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.