ADVERTISEMENT

ಗಾಲ್ಫ್‌: ಜಂಟಿ ಅಗ್ರಸ್ಥಾನದಲ್ಲಿ ಚಿಕ್ಕರಂಗಪ್ಪ

ಪಿಟಿಐ
Published 11 ಮಾರ್ಚ್ 2023, 19:31 IST
Last Updated 11 ಮಾರ್ಚ್ 2023, 19:31 IST

ಹುವಾ ಹಿನ್, ಥಾಯ್ಲೆಂಡ್‌: ಭಾರತದ ಎಸ್‌.ಚಿಕ್ಕರಂಗಪ್ಪ ಅವರು ಇಲ್ಲಿ ನಡೆಯುತ್ತಿರುವ ಗಾಲ್ಫ್‌ ಟೂರ್ನಿಯಲ್ಲಿ ಮೂರನೇ ಸುತ್ತಿನ ಬಳಿಕ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.

ಶನಿವಾರ ನಡೆದ ಸ್ಪರ್ಧೆ ಕೊನೆಗೊಳಿಸಲು ಅವರು 67 ಸ್ಟ್ರೋಕ್‌ಗಳನ್ನು ಬಳಸಿಕೊಂಡರು.

ಬಾಂಗ್ಲಾದೇಶದ ಸಿದ್ದೀಕುರ್‌ ರೆಹಮಾನ್, ಆಸ್ಟ್ರೇಲಿಯಾದ ಜಾಕ್‌ ಮರೆ ಮತ್ತು ಥಾಯ್ಲೆಂಡ್‌ನ ಜಾಜ್ ಜನೆವಾಟನನೊಂದ್ ಅವರು ಚಿಕ್ಕರಂಗಪ್ಪ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ADVERTISEMENT

ಭಾರತದ ಇನ್ನೊಬ್ಬ ಸ್ಪರ್ಧಿ ಕರಣ್‌ದೀಪ್‌ ಕೊಚಾರ್‌ ಅವರು ಜಂಟಿ 17ನೇ ಸ್ಥಾನದಲ್ಲಿದ್ದರೆ, ಗಗನ್‌ಜೀತ್ ಭುಲ್ಲರ್‌ ಜಂಟಿ 58ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.