ಕುಚಿಂಗ್ (ಮಲೇಷ್ಯಾ): ಭಾರತದ ವೆಲವನ್ ಸೆಂಥಿಲ್‌ಕುಮಾರ್ ಅವರು ಇಲ್ಲಿ ಶುಕ್ರವಾರ ನಡೆದ ಏಷ್ಯನ್ ಸ್ಕ್ವಾಷ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದರು.
ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸೆಂಥಿಲ್‌ಕುಮಾರ್ 1-3 (9-11, 11-13, 11-5, 6-11)ರಿಂದ ಹಾಂಗ್‌ಕಾಂಗ್‌ನ ಎರಡನೇ ಶ್ರೇಯಾಂಕದ ಅಲೆಕ್ಸ್ ಲಾ ತ್ಜ್ ಕ್ವಾನ್ ವಿರುದ್ಧ ಸೋತರು. ಸೆಮಿಫೈನಲ್‌ನಲ್ಲಿ ಸೋತವರಿಗೂ ಕಂಚಿನ ಪದಕ ನೀಡಲಾಗುತ್ತದೆ.
ಸೆಂಥಿಲ್‌ಕುಮಾರ್ ಅವರಿಗೆ ಏಷ್ಯನ್ ಟೂರ್ನಿಯಲ್ಲಿ ಇದು ಸತತ ಪದಕವಾಗಿದ್ದು, 2023ರ ಆವೃತ್ತಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.