ADVERTISEMENT

ನರೇಂದ್ರ ಪ್ರತಾಪ್‌ ನೂತನ ಕೂಟ ದಾಖಲೆ

ಅಖಿಲ ಭಾರತ ಅಂತರ ವಿ.ವಿ ಕ್ರೀಡಾಕೂಟ: ಮಂಗಳೂರು ವಿ.ವಿ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 19:45 IST
Last Updated 2 ಜನವರಿ 2020, 19:45 IST
ಮೂಡುಬಿದರೆಯಲ್ಲಿ ಗುರುವಾರ ನಡೆದ 10,000 ಮೀಟರ್‌ ಓಟದ ಸ್ಪರ್ಧೆಯಲ್ಲಿ ಗುರಿ ಸಾಧನೆಗೆ ಓಡುತ್ತಿರುವ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿ ಪ್ರತಾಪ್‌ ನರೇಂದರ್‌. (ಚೆಸ್‌ ನಂಬರ್‌ 2887)
ಮೂಡುಬಿದರೆಯಲ್ಲಿ ಗುರುವಾರ ನಡೆದ 10,000 ಮೀಟರ್‌ ಓಟದ ಸ್ಪರ್ಧೆಯಲ್ಲಿ ಗುರಿ ಸಾಧನೆಗೆ ಓಡುತ್ತಿರುವ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿ ಪ್ರತಾಪ್‌ ನರೇಂದರ್‌. (ಚೆಸ್‌ ನಂಬರ್‌ 2887)   

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯದ ನರೇಂದ್ರ ಪ್ರತಾಪ್‌ ಸಿಂಗ್‌, ಗುರುವಾರ ಸ್ವರಾಜ್‌ ಮೈದಾನದಲ್ಲಿ ಆರಂಭವಾದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಅಥ್ಲೆಟಿಕ್‌ ಕೂಟದ 10 ಸಾವಿರ ಮೀಟರ್‌ ಓಟದ ಸ್ಪರ್ಧೆಯಲ್ಲಿ ಕೂಟ ದಾಖಲೆಯೊಡನೆ ಗಮನ ಸೆಳೆದರು.

ರಾಜೀವ್‌ ಗಾಂಧಿ ಆರೋಗ್ಯವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಕಾಲೇಜು ಸಹಯೋಗದಲ್ಲಿ ನಡೆಯುತ್ತಿರುವ ಈ ಕೂಟದ ಮೊದಲ ಚಿನ್ನ ಮಂಗಳೂರು ವಿ.ವಿ. ಪಾಲಾಯಿತು. 10 ಸಾವಿರ ಮೀಟರ್‌ ಓಟವನ್ನು ಪ್ರತಾಪ್‌ ನರೇಂದರ್‌ 29 ನಿಮಿಷ 42.19 ಸೆಕೆಂಡುಗಳಲ್ಲಿ ಕ್ರಮಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡರು.

ಈ ಹಿಂದಿನ ದಾಖಲೆ ಮಂಗಳೂರು ವಿಶ್ವವಿದ್ಯಾಲಯದ ರಂಜಿತ್ ಕುಮಾರ್ ಪಟೇಲ್ (29 ನಿ. 45.89 ಸೆ) ಅವರ ಹೆಸರಿನಲ್ಲಿತ್ತು.

ADVERTISEMENT

ಮಹಿಳೆಯರ ವಿಭಾಗದ ಇದೇ ಸ್ಪರ್ಧೆಯನ್ನು ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ಸೋನುನ್‌ ಪೂನಮ್‌ (ಕಾಲ: 36ನಿಮಿಷ 32 ಸೆಕೆಂಡು) ಗೆದ್ದುಕೊಂಡರು.

ಮೊದಲ ದಿನದ ಫಲಿತಾಂಶಗಳು ಇಂತಿವೆ:

ಪುರುಷರು:10,000 ಮೀಟರ್‌ ಓಟ: ನರೇಂದ್ರ ಪ್ರತಾಪ್‌ ಸಿಂಗ್‌(ಮಂಗಳೂರು ವಿಶ್ವವಿದ್ಯಾಲಯ, ಕಾಲ: 29 ನಿ. 42.19 ಸೆ.)–1, ಕಿಶನ್ ತಡವಿ (ಪುಣೆ ಸಾವಿತ್ರಿಬಾಯಿ ಫುಲೆ ವಿವಿ, ಪುಣೆ, ಕಾಲ: 30 ನಿ 57.12 ಸೆ)–2, ಸಂತೋಷ್ ಯಾದವ್‌ (ಕೋಲ್ಕತ್ತ ವಿಶ್ವವಿದ್ಯಾಲಯ, ಕಾಲ: 30ನಿ.57.29 ಸೆ.), ನೂತನ ದಾಖಲೆ, ಹಳೆಯದು: 29ನಿ.45.89 ಸೆ.

ಮಹಿಳೆಯರ ವಿಭಾಗ: 10,000 ಮೀ. ಓಟ: ಸೋನುನ್‌ ಪೂನಮ್‌ (ಸಾವಿತ್ರಿಬಾಯಿ ಫುಲೆ ವಿ.ವಿ, ಪುಣೆ, ಕಾಲ: 36ನಿ.0.32 ಸೆ.)–1, ಕೆ.ಎಂ.ಅಮೃತಾ ಪಟೇಲ್‌ (ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠ, ವಾರಾಣಸಿ, ಕಾಲ: 36ನಿ.01.98 ಸೆ.) –2,ಸೋನಿಕಾ 36 ನಿ 02:04 ಸೆ (ಮಹರ್ಷಿ ದಯಾನಂದ ವಿಶ್ವವಿದ್ಯಾಲಯ, ರೋಹ್ಟಕ್‌, ಕಾಲ: 36ನಿ.02.04ಸೆ)–3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.