ADVERTISEMENT

ಐಒಸಿ ಅಧ್ಯಕ್ಷರೊಂದಿಗೆ ಪೆಂಗ್ ಶುಯಿ ಮಾತುಕತೆ

ಏಜೆನ್ಸೀಸ್
Published 23 ನವೆಂಬರ್ 2021, 7:13 IST
Last Updated 23 ನವೆಂಬರ್ 2021, 7:13 IST
ಪೆಂಗ್ ಶುಯಿ ಜೊತೆ ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಮಾತನಾಡಿದರು –ರಾಯಿಟರ್ಸ್ ಚಿತ್ರ
ಪೆಂಗ್ ಶುಯಿ ಜೊತೆ ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಮಾತನಾಡಿದರು –ರಾಯಿಟರ್ಸ್ ಚಿತ್ರ   

ಬೀಜಿಂಗ್‌: ಮೂರು ವಾರಗಳಿಂದ ನಾಪತ್ತೆಯಾಗಿದ್ದ ಚೀನಾ ಟೆನಿಸ್ ಆಟಗಾರ್ತಿ ಪೆಂಗ್ ಶುಯಿ ಅವರು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಕ್ ಜೊತೆ ವಿಡಿಯೊ ಕರೆ ಮೂಲಕ ಮಾತನಾಡಿದ್ದಾರೆ.

ಈ ಬೆಳವಣಿಗೆಯ ಮೂಲಕ ಒಲಿಂಪಿಕ್ ಸಮಿತಿ ಮತ್ತು ಚೀನಾ ಸರ್ಕಾರವು ಪೆಂಗ್ ಪ್ರಕರಣವನ್ನು ಕೊನೆಗೊಳಿಸಲು ನಿರ್ಧರಿಸಿದೆ. ಕಮ್ಯುನಿಸ್ಟ್ ಪಕ್ಷದ ನಾಯಕ ಜಾಂಗ್ ಗವೊಲಿ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ನಂತರ ನವೆಂಬರ್‌ ಎರಡರಂದು ಪೆಂಗ್ ನಾಪತ್ತೆಯಾಗಿದ್ದರು.

ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಡಬ್ಲ್ಯುಟಿಎ ಕೆಲವು ದಿನಗಳಿಂದ ಆಗ್ರಹಿಸುತ್ತಿದೆ. ವಿಡಿಯೊ ಬಿಡುಗಡೆಯಾದ ನಂತರವೂ ಅದು ತನ್ನ ಆಗ್ರಹವನ್ನು ಮುಂದುವರಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.