ADVERTISEMENT

ಭಾರತ ಕ್ರೀಡೆಗೆ ಸಂಕಷ್ಟ ?

ಪಾಕಿಸ್ತಾನದ ಶೂಟರ್‌ಗಳಿಗೆ ವೀಸಾ ನಿರಾಕರಣೆ

ಏಜೆನ್ಸೀಸ್
Published 22 ಫೆಬ್ರುವರಿ 2019, 19:34 IST
Last Updated 22 ಫೆಬ್ರುವರಿ 2019, 19:34 IST
ರಾಜೀವ್ ಮೆಹ್ತಾ
ರಾಜೀವ್ ಮೆಹ್ತಾ   

ನವದೆಹಲಿ: ಪಾಕಿಸ್ತಾನ ಶೂಟರ್‌ಗಳಿಗೆ ವೀಸಾ ನಿರಾಕರಿಸಿದ ಹಿನ್ನೆಲೆಯಲ್ಲಿ ಭಾರತದಲ್ಲಿ ಒಲಿಂಪಿಕ್ಸ್‌ಗೆ ಸಂಬಂಧಿಸಿದ ಕ್ರೀಡಾಕೂಟಗಳ ಆಯೋಜನೆಗೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅವಕಾಶ ನೀಡದೇ ಇರುವ ಸಾಧ್ಯತೆ ಇದೆ.

ಈ ವಿಷಯವನ್ನು ಭಾರತ ಒಲಿಂಪಿಕ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಶುಕ್ರವಾರ ತಿಳಿಸಿದ್ದು ‘ಸಮಸ್ಯೆ ಬಗೆಹರಿಯುವ ವರೆಗೆ ಮಾತುಕತೆಗೆ ಸಿದ್ಧವಿಲ್ಲ’ ಎಂದು ಐಒಸಿ ಸ್ಪಷ್ಟಪಡಿಸಿದೆ. ಭವಿಷ್ಯದಲ್ಲಿ ನಮ್ಮ ಅಥ್ಲೀಟ್‌ಗಳು ಪ್ರಮುಖ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದಕ್ಕೂ ಅವಕಾಶ ನೀಡದೇ ಇರುವ ಸಾಧ್ಯತೆ ಇದೆ ಎಂದಿದ್ದಾರೆ.

2026ರ ಯೂತ್ ಒಲಿಂಪಿಕ್ಸ್‌, 2030ರ ಏಷ್ಯಾ ಕ್ರೀಡಾಕೂಟ ಮತ್ತು 2032ರ ಒಲಿಂಪಿಕ್ಸ್ ಆಯೋಜಿಸಲು ಅವಕಾಶ ಕೋರಿ ಬಿಡ್ ಸಲ್ಲಿಸಲು ಭಾರತ ಮುಂದಾಗಿದ್ದು ಐಒಸಿಯ ನಿರ್ಧಾರದಿಂದಾಗಿ ಇದಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.