ADVERTISEMENT

ಏಳು ರಾಜ್ಯಗಳಲ್ಲಿ ಈಶ ಗ್ರಾಮೋತ್ಸವ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 14:21 IST
Last Updated 2 ಆಗಸ್ಟ್ 2025, 14:21 IST
<div class="paragraphs"><p> ಗ್ರಾಮೋತ್ಸವ ಆಚರಿಸಿ ಗ್ರಾಮೀಣ ಕ್ರೀಡೆ (ಸಾಂಕೇತಿಕ ಚಿತ್ರ)</p></div>

ಗ್ರಾಮೋತ್ಸವ ಆಚರಿಸಿ ಗ್ರಾಮೀಣ ಕ್ರೀಡೆ (ಸಾಂಕೇತಿಕ ಚಿತ್ರ)

   

ನವದೆಹಲಿ: ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಉತ್ಸವ ಎನಿಸಿರುವ ಈಶ ಗ್ರಾಮೋತ್ಸವದ 17ನೇ ಆವೃತ್ತಿಗೆ ಇದೇ ತಿಂಗಳ 10 ರಂದು ಮೈಸೂರಿನಲ್ಲಿ ಚಾಲನೆ ನೀಡಲಾಗುವುದು. ಈ ಹಿಂದಿನ ಗ್ರಾಮೋತ್ಸವಗಳಿಗಿಂತ ದೊಡ್ಡ ಪ್ರಮಾಣದಲ್ಲಿ– ಒಟ್ಟು ಏಳು ರಾಜ್ಯಗಳಲ್ಲಿ– ಈ ಬಾರಿಯ ಗ್ರಾಮೋತ್ಸವ ನಡೆಯಲಿದೆ.

ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಪುದುಚೇರಿ ಮತ್ತು (ಮೊದಲ ಬಾರಿಗೆ) ಒಡಿಶಾ ರಾಜ್ಯಗಳ 35,000 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಈ ಕ್ರೀಡೋತ್ಸವ ವ್ಯಾಪಿಸಿದೆ. 
ಈ ಬಾರಿ 6,000ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳಲಿವೆ.

ADVERTISEMENT

5,000ಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ 50,000 ಕ್ರೀಡಾಪಟುಗಳು ಮೈದಾನಕ್ಕೆ ಇಳಿಯಲಿದ್ದಾರೆ. ಪಂದ್ಯಾವಳಿಯಲ್ಲಿ ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋಬಾಲ್ ಆಟಗಳು ಇವೆ.

ಸೆಪ್ಟೆಂಬರ್ 21ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದ ಆದಿಯೋಗಿ ಸಮ್ಮುಖದಲ್ಲಿ ಅಂತಿಮ ಪಂದ್ಯ ನಡೆಯಲಿದೆ. ದೈಹಿಕ ಅಂಗವಿಕಲ ಆಟಗಾರರಿಗಾಗಿ ಪ್ಯಾರಾ ವಾಲಿಬಾಲ್ ಕೂಡ ಇರಲಿದೆ ಎಂದು ಈಶ ಗ್ರಾಮೋತ್ಸವದ ಸಂಯೋಜಕ ಸ್ವಾಮಿ ಪುಲಕ ಅವರು ತಿಳಿಸಿದ್ದಾರೆ.

ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ವಿಜೇತರಿಗೆ ತಲಾ ₹5 ಲಕ್ಷ ನೀಡಲಾಗುತ್ತದೆ ಎಂದೂ ತಿಳಿಸಿದ್ದಾರೆ. ಗ್ರಾಮೋತ್ಸವದಲ್ಲಿ ಒಟ್ಟು ₹67 ಲಕ್ಷ ಬಹುಮಾನ ಗೆಲ್ಲುವ ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.