ADVERTISEMENT

ಇಶಾಂತ್‌ ಸೇರಿ 29 ಅಥ್ಲೀಟ್‌ಗಳು ಅರ್ಜುನ ಪ್ರಶಸ್ತಿಗೆ ಶಿಫಾರಸು

ಪಿಟಿಐ
Published 18 ಆಗಸ್ಟ್ 2020, 12:41 IST
Last Updated 18 ಆಗಸ್ಟ್ 2020, 12:41 IST
ಇಶಾಂತ್‌ ಶರ್ಮಾ–ರಾಯಿಟರ್ಸ್ ಚಿತ್ರ
ಇಶಾಂತ್‌ ಶರ್ಮಾ–ರಾಯಿಟರ್ಸ್ ಚಿತ್ರ   

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ವೇಗಿ ಇಶಾಂತ್‌ ಶರ್ಮಾ ಸೇರಿದಂತೆ 29 ಅಥ್ಲೀಟುಗಳನ್ನು ಈ ಬಾರಿಯ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಪ್ರಶಸ್ತಿ ಆಯ್ಕೆ ಸಮಿತಿಯ ಸಭೆಯು ಮಂಗಳವಾರ ಇಲ್ಲಿನ ಭಾರತ ಕ್ರೀಡಾ ಪ್ರಾಧಿಕಾರದ ಮುಖ್ಯಕಚೇರಿಯಲ್ಲಿ ನಡೆಯಿತು.

ರಿಕರ್ವ್‌ ಆರ್ಚರಿ ಪಟು ಅತನು ದಾಸ್‌, ಭಾರತ ಹಾಕಿ ತಂಡದ ಆಟಗಾರ್ತಿ ದೀಪಿಕಾ ಠಾಕೂರ್‌, ಕಬಡ್ಡಿ ಆಟಗಾರ ದೀಪಕ್‌ ಹೂಡಾ ಹಾಗೂ ಟೆನಿಸ್‌ ಆಟಗಾರ ದಿವಿಜ್‌ ಶರಣ್‌ ಅವರನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

31 ವರ್ಷದ ಇಶಾಂತ್‌ ಅವರು 97 ಟೆಸ್ಟ್‌ ಹಾಗೂ 80 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400ಕ್ಕೂ ಹೆಚ್ಚು ವಿಕೆಟ್‌ಗಳನ್ನು ಗಳಿಸಿದ್ದಾರೆ.

ADVERTISEMENT

ಒಲಿಂಪಿಕ್‌ ಕಂಚಿನ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್‌ ಹಾಗೂ ಮಾಜಿ ವಿಶ್ವ ಚಾಂಪಿಯನ್‌ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಅವರಿಗೂ ಪ್ರಶಸ್ತಿ ನೀಡಲು ಸಮಿತಿಯು ಒಲವು ತೋರಿದೆ ಎನ್ನಲಾಗಿದೆ. ಆದರೆ ಈ ಇಬ್ಬರೂ ಅಥ್ಲೀಟ್‌ಗಳು ಈಗಾಗಲೇ ಖೇಲ್‌ರತ್ನ ಪ್ರಶಸ್ತಿಗೆ ಭಾಜನರಾಗಿರುವುದಿಂದ, ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಸಚಿವ ಕಿರಣ್‌ ರಿಜಿಜು ಅವರಿಗೆ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.