ADVERTISEMENT

₹ 1.5 ಕೋಟಿ ನೀಡಿ ನೀರಜ್‌ ಚೋಪ್ರಾ ಅವರ ಜಾವೆಲಿನ್ ಖರೀದಿಸಿದ್ದ ಬಿಸಿಸಿಐ

ಪಿಟಿಐ
Published 3 ಸೆಪ್ಟೆಂಬರ್ 2022, 1:42 IST
Last Updated 3 ಸೆಪ್ಟೆಂಬರ್ 2022, 1:42 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ಮರಣಿಕೆಗಳ ಇ–ಹರಾಜು ವೇಳೆ ನೀರಜ್‌ ಚೋಪ್ರಾ ಅವರ ಜಾವೆಲಿನ್‌ಅನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ₹ 1.5 ಕೋಟಿ ನೀಡಿ ಕೊಂಡುಕೊಂಡಿತ್ತು ಎಂಬ ವಿಷಯವನ್ನು ಮಂಡಳಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರು ಗಂಗಾ ನದಿಯನ್ನು ಸ್ವಚ್ಛಗೊಳಿಸುವ ‘ನಮಾಮಿ ಗಂಗೆ ಯೋಜನೆ’ಗೆ ನಿಧಿ ಸಂಗ್ರಹಿಸಲು ತಮ್ಮ ಸ್ಮರಣಿಕೆಗಳನ್ನು ಇ–ಹರಾಜು ಮಾಡಿದ್ದರು. ಸ್ಮರಣಿಕೆಗಳ ಪಟ್ಟಿಯಲ್ಲಿ ಚೋಪ್ರಾ ಅವರ ಜಾವೆಲಿನ್‌ ಕೂಡಾ ಇತ್ತು. 2021ರ ಸೆಪ್ಟೆಂಬರ್‌ನಿಂದ ಅಕ್ಟೋಬರ್‌ವರೆಗೆ ಇ–ಹರಾಜು ಪ್ರಕ್ರಿಯೆ ನಡೆದಿತ್ತು.

‘ಚೋಪ್ರಾ ಅವರ ಜಾವೆಲಿನ್‌ ಅಲ್ಲದೆ, ಇತರ ಕೆಲವು ಸ್ಮರಣಿಕೆಗಳನ್ನೂ ಹರಾಜಿನಲ್ಲಿ ಬಿಸಿಸಿಐ ತನ್ನದಾಗಿಸಿಕೊಂಡಿತ್ತು. ನಮಾಮಿ ಗಂಗೆ ಯೋಜನೆಗೆ ನೆರವಾಗುವುದು ನಮ್ಮ ಉದ್ದೇಶವಾಗಿತ್ತು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.