
ನಗರದ ಹೆಬ್ಬಾಳದಲ್ಲಿ ನೂತನವಾಗಿ ಆರಂಭವಾದ ಜೈನ್ ಹೆರಿಟೇಜ್ ಸ್ಪೋರ್ಟ್ಸ್ ಸ್ಕೂಲ್ ಉದ್ಘಾಟನಾ ಸಮಾರಂಭದಲ್ಲಿ ಜೆಎಚ್‌ಎಸ್ ನಿರ್ದೇಶಕಿ ಅರ್ಚನಾ ವಿಶ್ವನಾಥ್, ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಜೈನ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಚೆನ್‌ರಾಜ್ ರಾಯ್‌ಚಂದ್ , ಕ್ರಿಕೆಟಿಗ ಕೆ.ಎಲ್. ಶ್ರೀಜಿತ್ ಹಾಜರಿದ್ದರು
ಬೆಂಗಳೂರು: ನಗರದ ಹೆಬ್ಬಾಳದ ಜೈನ್ ಕ್ಯಾಂಪಸ್‌ನಲ್ಲಿ ಜೈನ್ ಹೆರಿಟೇಜ್ ಸ್ಕೂಲ್ (ಜೆಎಸ್‌ಎಸ್) ಮತ್ತು 91 ಸ್ಪೋರ್ಟಿಂಗ್ ಕಂಪನಿಯ ಸಹಯೋಗದಲ್ಲಿ ಆರಂಭಿಸಲಾದ ‘ಜೈನ್ ಹೆರಿಟೇಜ್ ಸ್ಪೋರ್ಟ್ಸ್ ಸ್ಕೂಲ್’ ಅನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಶನಿವಾರ ಲೋಕಾರ್ಪಣೆ ಮಾಡಿದರು.
‘ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದು ಎಷ್ಟು ಮುಖ್ಯವೋ, ಶೈಕ್ಷಣಿಕ ಪ್ರಗತಿಯೂ ಅಷ್ಟೇ ಮುಖ್ಯ. ಜೈನ್ ಹೆರಿಟೇಜ್ ಸ್ಪೋರ್ಟ್ಸ್ ಸ್ಕೂಲ್‌ನಂತಹ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ತಮ್ಮ ಕ್ರೀಡಾ ಮಹತ್ವಾಕಾಂಕ್ಷೆಗಳನ್ನು ಪೂರೈಸುವುದರ ಜೊತೆಗೆ ಶೈಕ್ಷಣಿಕ ನೈಪುಣ್ಯವನ್ನು ಪಡೆಯಲು ಉತ್ತಮ ಅವಕಾಶವನ್ನು ಒದಗಿಸುತ್ತವೆ’ ಎಂದು ಪ್ರಸಾದ್ ಹೇಳಿದರು.
ಜೈನ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಚೆನ್‌ರಾಜ್ ರಾಯ್‌ಚಂದ್ ಮಾತನಾಡಿ, ‘ಜೈನ್ ಹೆರಿಟೇಜ್ ಸ್ಪೋರ್ಟ್ಸ್ ಸ್ಕೂಲ್ ಮೂಲಕ ನಾವು ಪ್ರತಿವರ್ಷ 300 ಗಂಟೆಗಳ ಕೇಂದ್ರೀಕೃತ ಶಿಕ್ಷಣದೊಂದಿಗೆ ಸುಮಾರು 1,000 ಗಂಟೆಗಳ ವ್ಯವಸ್ಥಿತ ಕ್ರೀಡಾ ತರಬೇತಿಯನ್ನು ನೀಡುದ್ದೇವೆ. ಈ ಮಾದರಿಯು ಕೇವಲ ಕ್ರೀಡಾಪಟುಗಳನ್ನು ಮಾತ್ರವಲ್ಲದೆ ನಾಯಕರು, ಉದ್ಯಮಿಗಳು, ಚಿಂತಕರು ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಚಾಂಪಿಯನ್‌ಗಳನ್ನು ಸೃಷ್ಟಿಸುತ್ತದೆ’ ಎಂದು ತಿಳಿಸಿದರು.
ಜೈನ್ ಹೆರಿಟೇಜ್ ಸ್ಪೋರ್ಟ್ಸ್ ಸ್ಕೂಲ್ ಅನ್ನು ವೃತ್ತಿಪರ ಕ್ರೀಡಾ ತರಬೇತಿ ಮತ್ತು ಉನ್ನತ ಶೈಕ್ಷಣಿಕ ಗುಣಮಟ್ಟವನ್ನು ಸಮತೋಲನಗೊಳಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.