
ಪ್ರಜಾವಾಣಿ ವಾರ್ತೆ
ಚಾಂಪಿಯನ್ ಜೈನ್ ವಿಶ್ವವಿದ್ಯಾಲಯ ತಂಡ
ಬೆಂಗಳೂರು: ಜೈನ್ ವಿಶ್ವವಿದ್ಯಾಲಯ ಪುರುಷರ ತಂಡವು ಮುಂಬೈನಲ್ಲಿ ಈಚೆಗೆ ನಡೆದ ಅಖಿಲ ಭಾರತ ಅಂತರ ವಿ.ವಿ. ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಮುಂಬೈ ವಿಶ್ವವಿದ್ಯಾಲಯದ ಆತಿಥ್ಯದಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಫೈನಲ್ ಹಣಾಹಣಿಯಲ್ಲಿ ಜೈನ್ ವಿ.ವಿ. ತಂಡವು 75–71ರಿಂದ ಆತಿಥೇಯ ತಂಡವನ್ನು ರೋಚಕವಾಗಿ ಮಣಿಸಿತು.
ಇದಕ್ಕೆ ಮೊದಲು ನಡೆದ ಸೆಮಿಫೈನಲ್‌ನಲ್ಲಿ ಜೈನ್ ತಂಡವು 64–57ರಿಂದ ಪಂಜಾಬ್ ವಿಶ್ವವಿದ್ಯಾಲಯ ತಂಡವನ್ನು ಸೋಲಿಸಿತ್ತು.
ಜೈನ್ ವಿ.ವಿ. ತಂಡದ ಸುಮಂತ್ ಸತ್ಯನಾರಾಯಣ ಅವರು ಚಾಂಪಿಯನ್‌ಷಿಪ್‌ನ ಅತ್ಯಂತ ಮೌಲ್ಯಯುತ ಆಟಗಾರ ಗೌರವಕ್ಕೆ ಭಾಜನರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.